alex Certify
ಕನ್ನಡ ದುನಿಯಾ       Mobile App
       

Kannada Duniya

ತಿರುಪತಿಯಲ್ಲಿ ಭಕ್ತರು ನೀಡಿದ ಒಂದು ತಿಂಗಳ ಮುಡಿಯಿಂದ ಸಂಗ್ರಹವಾಯ್ತು ಬರೋಬ್ಬರಿ 7.84 ಕೋಟಿ ರರೂ.

ಹೈದರಾಬಾದ್: ವಿಶ್ವ ವಿಖ್ಯಾತ ತಿರುಪತಿ ತಿಮ್ಮಪ್ಪ ದೇವಾಲಯದಲ್ಲಿ ಭಕ್ತರು ನೀಡಿದ ಕೇವಲ ಒಂದು ತಿಂಗಳ ಮುಡಿಯಿಂದಾಗಿ ಬರೋಬ್ಬರಿ 7.84 ಕೋಟಿ ರೂ. ಆದಾಯ ಸಂಗ್ರಹವಾಗಿದೆ.

ಭಕ್ತರು ಮುಡಿ ಕೊಟ್ಟ ಕೂದಲನ್ನು ತಿರುಪತಿ-ತಿರುಮಲ ದೇವಸ್ಥಾನ ಆಡಳಿತಮಂಡಳಿ( ಟಿಟಿಡಿ) ಇ-ಹರಾಜಿಗೆ ಇಟ್ಟಿದ್ದು, ಭಕ್ತರು ಮುಡಿ ಕೊಟ್ಟ ಕೂದಲಿನಲ್ಲಿ ಒಟ್ಟು 5,600 ಕೆಜಿ ಕೂದಲು ಹರಾಜಿನಲ್ಲಿ ಮಾರಾಟವಾಗಿದ್ದು, 7.84 ಕೋಟಿ ರೂ ಸಂಗ್ರಹವಾಗಿದೆ.

ಮುಡಿ ಕೂದಲನ್ನು 31 ಇಂಚುಗಳಿಗಿಂತ ಉದ್ದದ ಕೂದಲನ್ನು ಮೊದಲ ವರ್ಗ, 16ರಿಂದ 30 ಇಂಚು ಉದ್ದದ ಕೂದಲನ್ನು ಎರಡನೇ ವರ್ಗ ಹಾಗೂ 10ರಿಂದ 15 ಇಂಚು ಉದ್ದದ ಕೂದಲನ್ನು ಮೂರನೇ ವರ್ಗ ಎಂದು ಮೂರು ವಿಧಗಳಾಗಿ ವಿಂಗಡಿಸಿ ಟಿಟಿಡಿ ಅವುಗಳಿಗೆ ದರ ನಿಗದಿ ಮಾಡಿತ್ತು. ಮೊದಲ ವರ್ಗದಲ್ಲಿ 1600 ಕೆ.ಜಿ. ಕೂದಲು 3.56 ಕೋಟಿ ರೂ.ಗೆ ಹರಾಜಾದರೆ, ಎರಡನೇ ವರ್ಗದಲ್ಲಿ 2,000 ಕೆ.ಜಿ. ಕೂದಲು 3.44 ಕೋಟಿ ರೂ.ಗೆ ಮಾರಾಟವಾಗಿದೆ.

ಇನ್ನು ಮೂರನೇ ವರ್ಗದಲ್ಲಿ 800 ಕೆ.ಜಿ. ಕೂದಲು 24.11 ಲಕ್ಷ ರೂ. ಗೆ ಬಿಕರಿಯಾಗಿದೆ. ಇನ್ನು 6,700 ಕೆ.ಜಿ. ಬಿಳಿ ಕೂದಲಿನಲ್ಲಿ 1200 ಕೆ.ಜಿ. ಮಾರಾಟವಾಗಿದ್ದು, 66.55 ಲಕ್ಷ ರೂ. ಬಂದಿದೆ. ಒಟ್ಟಾರೆ ಭಕ್ತರು ನೀಡಿದ ಒಂದು ತಿಂಗಳ ಮುಡಿ ಕೂದಲಿನಿಂದಲೇ ಟಿಟಿಡಿ 7.84 ಕೋಟಿ ರೂ ಆದಾಯ ಸಂಗ್ರಹಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...