alex Certify
ಕನ್ನಡ ದುನಿಯಾ       Mobile App
       

Kannada Duniya

ಜಿ.ಎಸ್.ಟಿ. ಹೆಸರು ಹೇಳಿ ಜನ್ರಿಗೆ ಮೋಸ ಮಾಡಿದ್ರೆ ಎಚ್ಚರ

ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜಿ.ಎಸ್.ಟಿ. ತೆರಿಗೆ ನೀತಿ ಜಾರಿಗೆ ತಂದಿದೆ. ಯಾವ ವಸ್ತುಗಳಿಗೆ ಎಷ್ಟು ಜಿ.ಎಸ್.ಟಿ. ವಿಧಿಸಲಾಗ್ತಿದೆ ಎಂಬ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಇದನ್ನು ಕೆಲ ವ್ಯಾಪಾರಸ್ಥರು ತಮ್ಮ ಲಾಭಕ್ಕೆ ಬಳಸಿಕೊಳ್ತಿದ್ದಾರೆ. ಜಿ.ಎಸ್.ಟಿ. ಹೆಸರು ಹೇಳಿ ಜನರ ಸುಲಿಗೆ ಮಾಡುತ್ತಿದ್ದಾರೆ. ಅಂಥವರ ಭ್ರಷ್ಟಾಚಾರ ಇನ್ಮುಂದೆ ನಡೆಯೋದಿಲ್ಲ.

ವ್ಯಾಪಾರಿ ಅಥವಾ ಕಂಪನಿ ಜಿ.ಎಸ್.ಟಿ. ವಿರುದ್ಧವಾಗಿ ಹಣ ವಸೂಲಿ ಮಾಡ್ತಿದೆ ಎಂಬುದು ನಿಮ್ಮ ಗಮನಕ್ಕೆ ಬಂದ್ರೆ ತಕ್ಷಣ ನೀವು ಈ ಸಂಗತಿಯನ್ನು ಸರ್ಕಾರಕ್ಕೆ ತಿಳಿಸಬಹುದಾಗಿದೆ. ಸರ್ಕಾರ ಇದಕ್ಕಾಗಿ ಸಹಾಯವಾಣಿ ಶುರು ಮಾಡಿದೆ. ಗ್ರಾಹಕರು ಮೋಸವಾಗಿದ್ದು ತಿಳಿದಲ್ಲಿ ಸಹಾಯ ವಾಣಿಗೆ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಕರೆ ಮಾಡಬಹುದಾಗಿದೆ. ನಂತ್ರ ಮಧ್ಯಾಹ್ನ 1.30 ರಿಂದ ಸಂಜೆ 6 ಗಂಟೆಯವರೆಗೆ ದೂರು ದಾಖಲಿಸಲು ಅವಕಾಶವಿರುತ್ತದೆ.

ಸಹಾಯವಾಣಿ ಸಂಖ್ಯೆ 011-21400643 ಆಗಿದೆ. ಎನ್ಎಎ ತನ್ನ ವೆಬ್ಸೈಟ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ. ಜಿ.ಎಸ್.ಟಿ. ಜಾರಿಗೆ ಬಂದು ಒಂದು ವರ್ಷ ಕಳೆದಿದೆ. ಜಿ.ಎಸ್.ಟಿ. ಕೌನ್ಸಿಲ್ ನಿರಂತರವಾಗಿ ವಸ್ತುಗಳ ಮೇಲೆ ವಿಧಿಸಿದ್ದ ಜಿ.ಎಸ್.ಟಿ.ಯನ್ನು ಇಳಿಕೆ ಮಾಡ್ತಿದೆ. ಆದ್ರೆ ಇದ್ರ ಲಾಭ ಗ್ರಾಹಕರನ್ನು ತಲುಪುತ್ತಿಲ್ಲ. ಜಿ.ಎಸ್.ಟಿ. ದರ ಇಳಿಕೆಯಾದ್ರೂ ಕಂಪನಿಗಳು ವಸ್ತುಗಳ ಬೆಲೆ ಇಳಿಸಿಲ್ಲ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...