alex Certify
ಕನ್ನಡ ದುನಿಯಾ       Mobile App
       

Kannada Duniya

1.8 ಕೋಟಿ ರೂ. ಮೌಲ್ಯದ ನಟರಾಜ ವಿಗ್ರಹ ವಶ

natarajaಪೊಲೀಸರು ಅದೆಷ್ಟೇ ಅಲರ್ಟ್ ಆಗಿದ್ರೂ ಸ್ಮಗ್ಲಿಂಗ್ ಗೆ ಮಾತ್ರ ಬ್ರೇಕ್ ಬಿದ್ದಿಲ್ಲ. ಅದ್ರಲ್ಲೂ ಇಂಡೋ-ನೇಪಾಳ ಗಡಿಯಲ್ಲಿ ಕಳ್ಳಸಾಗಣೆ ಅವ್ಯಾಹತವಾಗಿ ನಡೆಯುತ್ತಿದೆ.

ಭಾರತ-ನೇಪಾಳ ಗಡಿಯಲ್ಲಿ ಕಳ್ಳ ಸಾಗಣಿಕೆಯಾಗ್ತಾ ಇದ್ದ 1.8 ಕೋಟಿ ರೂ.ಮೌಲ್ಯದ ನಟರಾಜ ವಿಗ್ರಹವನ್ನು ವಶಪಡಿಸಿಕೊಳ್ಳಲಾಗಿದೆ. ಉತ್ತರ ಪ್ರದೇಶದ ಬಹ್ರೇಚ್ ಜಿಲ್ಲೆಯ ಸುಜೌಲಿ ಗ್ರಾಮಸ್ಥನೊಬ್ಬ ನಟರಾಜ ಮೂರ್ತಿಯನ್ನು ಕಠ್ಮಂಡುಗೆ ಸಾಗಿಸುತ್ತಿದ್ದ. ಚುರುಕಿನ ಕಾರ್ಯಾಚರಣೆ ನಡೆಸಿದ ಎಸ್ ಎಸ್ ಬಿ ಹಾಗೂ ಉತ್ತರ ಪ್ರದೇಶ ಪೊಲೀಸರು ಸ್ಮಗ್ಲರ್ ನನ್ನು ಬಂಧಿಸಿದ್ದಾರೆ.

ನಟರಾಜನನ್ನು ಈಶ್ವರನ ಪ್ರತಿರೂಪ ಎಂದೇ ಭಾವಿಸಲಾಗುತ್ತದೆ. ನಟರಾಜ ದೈವಿಕ ನೃತ್ಯ ಮಾಡಿದ್ರೆ ಬ್ರಹ್ಮಾಂಡದ ವಿನಾಶ ಮತ್ತು ನವೀಕರಣ ಎರಡೂ ಸಾಧ್ಯ ಎಂಬ ನಂಬಿಕೆಯಿದೆ. ನಟರಾಜ ಸೃಷ್ಟಿಕರ್ತ ಬ್ರಹ್ಮನ ಅಪರಾವತಾರ ಎನ್ನುವ ನಂಬಿಕೆ ಭಕ್ತರಲ್ಲಿದೆ. ಹಾಗಾಗಿ ನಟರಾಜ ವಿಗ್ರಹಕ್ಕೆ ಎಲ್ಲೆಡೆ ಭಾರೀ ಬೇಡಿಕೆಯಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...