alex Certify
ಕನ್ನಡ ದುನಿಯಾ       Mobile App
       

Kannada Duniya

ನರೇಶ್ ಅಗರ್ವಾಲ್ ಮಾತಿಗೆ ಮನಬಿಚ್ಚಿ ನಕ್ಕರು ಮೋದಿ

arun-and-modi

ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಬಿಸಿಬಿಸಿ ಚರ್ಚೆಯಾಗ್ತಾ ಇದೆ. ನೋಟಿನ ವಿಚಾರ ವಿರೋಧ ಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ. ವಿಪಕ್ಷ ಸೇರಿದಂತೆ ಆಡಳಿತ ಪಕ್ಷದ ಸದಸ್ಯರಲ್ಲಿ ನಗುವಿಲ್ಲ. ಆದ್ರಿಂದು ರಾಜ್ಯಸಭೆ ನಗುವಿನಲ್ಲಿ ತೇಲಿ ಹೋಗಿತ್ತು. ಪ್ರಧಾನ ಮಂತ್ರಿ ನರೇಂದ್ರ ಮೋದಿ, ಅರುಣ್ ಜೇಟ್ಲಿ ಸೇರಿದಂತೆ ವಿಪಕ್ಷದ ಸದಸ್ಯರೂ ಮನಸ್ಪೂರ್ತಿ ನಕ್ಕಿದ್ದಾರೆ.

ರಾಜ್ಯಸಭೆ ನಗುವಿನಲ್ಲಿ ತೇಲಲು ಕಾರಣವಾಗಿದ್ದು ಎಸ್ಪಿ ಸಂಸದ ನರೇಶ್ ಅಗರ್ವಾಲ್. ನೋಟು ನಿಷೇಧ ವಿಚಾರದ ಬಗ್ಗೆ ಮಾತನಾಡ್ತಾ ಇದ್ದ ನರೇಶ್ ಅಗರ್ವಾಲ್, ಪ್ರಧಾನ ಮಂತ್ರಿಯವರೆ ನೀವು ಅರುಣ್ ಜೇಟ್ಲಿಯವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಇದು ಎಷ್ಟು ನಿಜವೋ ಗೊತ್ತಿಲ್ಲ. ಆದ್ರೆ ತೆಗೆದುಕೊಂಡಿದ್ದರೆ ಅವರು ನನ್ನ ಕಿವಿಯಲ್ಲಿ ಹೇಳ್ತಾ ಇದ್ದರು ಎಂದಿದ್ದಾರೆ. ಇದನ್ನು ಕೇಳಿದ ಸದನ ನಗೆಗಡಲಲ್ಲಿ ತೇಲಿಹೋಯ್ತು.

ನೀವು ಭಾವುಕರಾಗಿ ಜೀವಕ್ಕೆ ಅಪಾಯವಿದೆ ಅಂತಾ ಹೇಳಿದ್ರೆ ನಮಗೂ ದುಃಖವಾಗುತ್ತೆ. ನೀವು ಉತ್ತರ ಪ್ರದೇಶದಲ್ಲಿ ನಿರಾಳರಾಗಿ ತಿರುಗಾಡಬಹುದು. ನಮ್ಮ ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಉತ್ತಮವಾಗಿದೆ ಎಂದಿದ್ದಾರೆ ನರೇಶ್. ಇದನ್ನು ಕೇಳಿದ ಮೋದಿ ಸೇರಿದಂತೆ ಸದನದಲ್ಲಿದ್ದ ಸದಸ್ಯರು ಜೋರಾಗಿ ನಕ್ಕಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...