alex Certify
ಕನ್ನಡ ದುನಿಯಾ       Mobile App
       

Kannada Duniya

ಮೋದಿ-ಮನಮೋಹನ್ ಸಿಂಗ್ ರ ವಿದೇಶ ಪ್ರವಾಸಕ್ಕೆ ವೆಚ್ಚವಾಗಿರುವುದೆಷ್ಟು ಗೊತ್ತಾ?

ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶ ಪ್ರವಾಸ ಹಾಗೂ ಯುಪಿಎಯ 2ನೇ ಅವಧಿಯಲ್ಲಿ ಪ್ರಧಾನಿಯಾಗಿದ್ದ ಮನಮೋಹನ್‌ ಸಿಂಗ್‌ ಅವರ ವಿದೇಶ ಪ್ರಯಾಣದ ಮೊತ್ತ ಸರಿ ಸಮಾನವಾಗಿದೆ. ಇಬ್ಬರೂ ನಾಯಕರ ಪ್ರವಾಸಕ್ಕೆ ಏರ್‌ ಇಂಡಿಯಾ ಸಂಸ್ಥೆಗೆ 387 ಕೋಟಿ ರೂ. ಗಳನ್ನು ಪಾವತಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರ ವಿದೇಶ ಪ್ರವಾಸಕ್ಕೆ ಕಳೆದ ನಾಲ್ಕು ವರ್ಷದಲ್ಲಿ 387.35 ಕೋಟಿ ರೂ. ನಷ್ಟು ಏರ್‌ ಇಂಡಿಯಾಗೆ ಪಾವತಿಸಲಾಗಿದ್ದರೆ, 2009-13 ರ ವರೆಗೆ ಪ್ರಧಾನಿಯಾಗಿದ್ದ ಮನಮೋಹನ್‌ ಸಿಂಗ್‌ ಅವರ ವಿದೇಶ ಪ್ರವಾಸಕ್ಕೆ 386.35 ಕೋಟಿ ರೂ. ಪಾವತಿ ಮಾಡಲಾಗಿದೆ. ಮನಮೋಹನ್‌ ಸಿಂಗ್‌ ಅವರ ಮೊದಲ ಅವಧಿಗಿಂತ 2ನೇ ಅವಧಿಯಲ್ಲಿ 91 ಲಕ್ಷ ರೂ. ಹೆಚ್ಚು ಮೊತ್ತವನ್ನು ಏರ್‌ ಇಂಡಿಯಾಗೆ ಪ್ರಯಾಣದ ಲೆಕ್ಕದಲ್ಲಿ ಪಾವತಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶದಲ್ಲಿ ತಂಗಿದ ದಿನ, ಮನಮೋಹನ್‌ ಸಿಂಗ್‌ ಅವರಿಗಿಂತ ಹೆಚ್ಚಾಗಿದೆ. ಮನಮೋಹನ್ ಸಿಂಗ್‌ ಮೊದಲ 4 ವರ್ಷದಲ್ಲಿ 131, ಎರಡನೇ ಅವಧಿಯಲ್ಲಿ 161 ದಿನಗಳನ್ನು ವಿದೇಶ ಪ್ರವಾಸದಲ್ಲಿ ಕಳೆದಿದ್ದಾರೆ. ಪ್ರಧಾನಿ ಮೋದಿ ನಾಲ್ಕು ವರ್ಷದಲ್ಲಿ 155 ಹಾಗೂ ಈವರೆಗೆ ಒಟ್ಟಾರೆ 182 ದಿನಗಳ ಕಾಲ ವಿದೇಶದಲ್ಲಿದ್ದರು. ಮನಮೋಹನ್‌ ಸಿಂಗ್‌ ತಮ್ಮ 2ನೇ ಅವಧಿಯಲ್ಲಿ 38 ಬಾರಿ ವಿದೇಶ ಪ್ರವಾಸ ಕೈಗೊಂಡಿದ್ದರೆ, ಮೋದಿ ಈವರೆಗೆ 43 ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಅಂತೆಯೇ ಯುಪಿಎಯ ಮೊದಲ ಅವಧಿಯಲ್ಲಿ ಸಿಂಗ್‌ 34 ಬಾರಿ ವಿದೇಶ ಪ್ರವಾಸಕ್ಕೆ ತೆರಳಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...