alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ರಂಪ್ ಸೇರಿ ವಿಶ್ವದ ನಾಯಕರಿಗೆ ಹಿಮದಲ್ಲಿ ಯೋಗ ಕಲಿಸಲಿದ್ದಾರೆ ಮೋದಿ

ಸ್ವಿಟ್ಜರ್ಲೆಂಡ್ ನ ದಾವೋಸ್ ನಲ್ಲಿ ಜನವರಿ 23ರಿಂದ ಜನವರಿ 27ರವರೆಗೆ ಡಬ್ಲ್ಯೂಇಎಫ್ ವಿಶ್ವ ಆರ್ಥಿಕ ವೇದಿಕೆ (WEF) ಶೃಂಗಸಭೆ ನಡೆಯಲಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೂಡ ಈ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ವಿದೇಶಿ ಸಚಿವಾಲಯದ ಮಾಹಿತಿ ಪ್ರಕಾರ, ಪ್ರಧಾನ ಮಂತ್ರಿ ನರೇಂದ್ರ ಮೋದಿ ದಾವೋಸ್ ಶೃಂಗಸಭೆಯಲ್ಲಿ ಹಿಮದ ಮಧ್ಯೆ ಯೋಗದ ತರಬೇತಿ ನೀಡಲಿದ್ದಾರಂತೆ.

ವಿದೇಶಾಂಗ ಸಚಿವಾಲಯ ಶುಕ್ರವಾರ ಈ ಬಗ್ಗೆ ಮಾಹಿತಿ ನೀಡಿದೆ. ವಿಶ್ವ ಆರ್ಥಿಕ ವೇದಿಕೆ ಶೃಂಗಸಭೆಯಲ್ಲಿ ಭಾರತ ಪ್ರಮುಖ ಪಾತ್ರವಹಿಸಲಿದೆ. ಶೃಂಗಸಭೆಗೆ ಬರುವ ರಾಷ್ಟ್ರಧ್ಯಕ್ಷರು, ಬಹುದೊಡ್ಡ ಕಂಪನಿಗಳ ಸಿಇಒ ಗಳಿಗೆ ಭಾರತ ಯೋಗ ಕಲಿಸಲಿದೆ. ಶೃಂಗಸಭೆ ವೇಳೆ ಮೋದಿ ಜೊತೆ ಭಾರತದಿಂದ ಇಬ್ಬರು ಯೋಗ ಶಿಕ್ಷಕರು ಸ್ವಿಟ್ಜರ್ಲೆಂಡ್ ಗೆ ಹೋಗಲಿದ್ದಾರೆ ಎನ್ನಲಾಗಿದೆ.

ಭಾರತದ ಯೋಗವನ್ನು ಅಂತರಾಷ್ಟ್ರೀಯ ಮಟ್ಟಕ್ಕೇರಿಸಿದ ಕೀರ್ತಿ ಪಿಎಂ ಮೋದಿ ಹಿಂದಿದೆ. ಶೃಂಗಸಭೆಯಲ್ಲಿ ಭಾರತೀಯ ಆಹಾರ ಪದ್ಧತಿ ಹಾಗೂ ಸಂಸ್ಕೃತಿ ಬಗ್ಗೆಯೂ ಮಾಹಿತಿ ನೀಡಲಾಗುವುದು ಎನ್ನಲಾಗಿದೆ. ಶೃಂಗಸಭೆಯಲ್ಲಿ ಮೋದಿ ಡೊನಾಲ್ಡ್ ಟ್ರಂಪ್ ಭೇಟಿಯಾಗಲಿದ್ದಾರೆ. ಹಿಂದಿನ ವರ್ಷ ಎರಡು ಬಾರಿ ಟ್ರಂಪ್ ಹಾಗೂ ಮೋದಿ ಭೇಟಿಯಾಗಿದ್ದರು. 20 ವರ್ಷಗಳ ನಂತ್ರ ಭಾರತದ ಪ್ರಧಾನಿಯೊಬ್ಬರು ದಾವೋಸ್ ಗೆ ತೆರಳುತ್ತಿದ್ದಾರೆ. ಈ ಹಿಂದೆ 1997ರಲ್ಲಿ ದಾವೋಸ್ ಶೃಂಗಸಭೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡ ಪಾಲ್ಗೊಂಡಿದ್ದರು.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...