alex Certify
ಕನ್ನಡ ದುನಿಯಾ       Mobile App
       

Kannada Duniya

ವರ್ಷದ ಕೊನೆಯ ‘ಮನ್ ಕಿ ಬಾತ್’ನಲ್ಲಿ ಮೋದಿ ಹೇಳಿದ್ದೇನು…?

ನವದೆಹಲಿ: ವರ್ಷದ ಕೊನೆಯ ‘ಮನ್ ಕಿ ಬಾತ್’ನಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನರನ್ನುದ್ದೇಶಿಸಿ ಮಾತನಾಡಿದ್ದಾರೆ.

ನಾಳೆ ಜನವರಿ 1, ಹೊಸ ವರ್ಷದ ಸಂದರ್ಭದಲ್ಲಿ ಎಲ್ಲರಿಗೂ ಶುಭಾಶಯ ಹೇಳುತ್ತೇನೆ. ಭಾರತ ಸೇವೆಗೆ ಒತ್ತು ನೀಡುವ ದೇಶವಾಗಿದೆ. ಹಲವಾರು ಮಹನೀಯರು ಸೇವೆಯ ಬಗ್ಗೆ ಹೇಳಿದ್ದಾರೆ. ಯುವ ಪೀಳಿಗೆ ನವ ಭಾರತದ ಕನಸನ್ನು ನನಸು ಮಾಡುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.

ಹೊಸ ವರ್ಷದ ಸಂದರ್ಭದಲ್ಲಿ ಯುವಕರಿಗೆ ವಿಶೇಷವಾದ ಶುಭಾಶಯಗಳು. ಅವರು ಹೊಸ ಭಾರತವನ್ನು ನಿರ್ಮಾಣ ಮಾಡಬಲ್ಲರು. ಪ್ರಜಾಪ್ರಭುತ್ವ ವ್ಯವಸ್ಥೆಗೆ ಅವರಿಗೆ ಸ್ವಾಗತ. ಮುಂದೆ ಅವರು ಮತ ಚಲಾಯಿಸಿ ಹೊಸ ಬದಲಾವಣೆಯನ್ನು ತರಲಿದ್ದಾರೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯಕ್ಕೆ ಬರಬೇಕಿದೆ ಎಂದು ಹೇಳಿದ್ದಾರೆ.

ಸ್ವಚ್ಛ ಭಾರತ್ ಅಭಿಯಾನ ಯಶಸ್ವಿಯಾಗಿ ನಡೆದಿದೆ. ಜನವರಿ 4 ರಿಂದ ಸ್ವಚ್ಛತಾ ಸಮೀಕ್ಷೆಗಳನ್ನು ನಡೆಸಲಾಗುವುದು. ಈ ಬಾರಿ ಗಣರಾಜ್ಯೋತ್ಸವ ವಿಶೇಷವಾಗಿದೆ. ಏಷಿಯಾನ್ ದೇಶಗಳ ನಾಯಕರೊಂದಿಗೆ ರಿಪಬ್ಲಿಕ್ ಡೇ ಆಚರಿಸಲಾಗುವುದು ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...