alex Certify
ಕನ್ನಡ ದುನಿಯಾ       Mobile App
       

Kannada Duniya

ಉತ್ತರಖಂಡದಲ್ಲಿ ಪ್ರಚಾರ ರ್ಯಾಲಿ ನಡೆಸಿದ ಪಿಎಂ

modi_tflfnit

ಪ್ರಧಾನ ಮಂತ್ರಿ ನರೇಂದ್ರ ಮೋದಿ ಉತ್ತರಖಂಡದಲ್ಲಿಂದು ಚುನಾವಣಾ ಪ್ರಚಾರ ನಡೆಸಿದ್ದಾರೆ. ರ್ಯಾಲಿ ವೇಳೆ ಉತ್ತರಖಂಡದ ಮುಖ್ಯಮಂತ್ರಿ ಹರೀಶ್ ರಾವತ್ ವಿರುದ್ಧ ಕಿಡಿಕಾರಿದ್ದಾರೆ. ಉತ್ತರಖಂಡ ರಾಜ್ಯ ಮಾಡುವ ಇಚ್ಛೆಯೇ ರಾವತ್ ಗಿರಲಿಲ್ಲ. ಈಗವರು ಇದೇ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆಂದು ಮೋದಿ ವ್ಯಂಗ್ಯವಾಡಿದ್ದಾರೆ. ಉತ್ತರಖಂಡದ ಮೇಲೆ ಪ್ರೀತಿಯಿಲ್ಲದ ವ್ಯಕ್ತಿಗಳು ರಾಜ್ಯದ ಅಭಿವೃದ್ಧಿಗೆ ಏನು ಮಾಡಬಲ್ಲರು ಎಂದಿದ್ದಾರೆ ಮೋದಿ.

ಸರ್ಜಿಕಲ್ ಸ್ಟ್ರೈಕ್ ಬಗ್ಗೆಯೂ ಮಾತನಾಡಿದ ಮೋದಿ ಎಷ್ಟು ದಿನ ಹೊಡೆತ ಸಹಿಸಿಕೊಳ್ಳಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಕಾಲ ಬದಲಾಗಿದೆ. ಈಗ ಸಹಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ತಿರುಗೇಟು ನೀಡುವ ಸಮಯ ಎಂದು ಮೋದಿ ಹೇಳಿದ್ದಾರೆ. ಇಂದು ಫೆಬ್ರವರಿ 12. ಮುಂದಿನ ತಿಂಗಳು 12ರೊಳಗೆ ಚುನಾವಣಾ ಫಲಿತಾಂಶ ಬಂದಿರುತ್ತದೆ. ಮಾರ್ಚ್ 11ರಂದು ಬರುವ ಫಲಿತಾಂಶ ಅಭೂತಪೂರ್ವವಾಗಿರುತ್ತದೆ ಎಂದಿದ್ದಾರೆ ಮೋದಿ.

ಅಟಲ್ ಬಿಹಾರಿ ವಾಜಪೇಯಿ ತಮ್ಮ ಅಧಿಕಾರಾವಧಿಯಲ್ಲಿ 3 ಹೊಸ ರಾಜ್ಯಗಳನ್ನು ರಚಿಸಿದ್ದಾರೆ. ಛತ್ತೀಸ್ಗಡ ಮಧ್ಯಪ್ರದೇಶದಿಂದ, ಜಾರ್ಖಂಡ ಬಿಹಾರದಿಂದ ಹಾಗೂ ಉತ್ತರಖಂಡ ಯುಪಿಯಿಂದ ಬೇರ್ಪಟ್ಟಿದೆ. ಉಳಿದ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಉತ್ತರಖಂಡದ ಬಗ್ಗೆ ಕೆಟ್ಟದಾಗಿ ಮಾತನಾಡಿದವರೇ ಈಗ ಸಿಎಂ ಹುದ್ದೆಗೇರಿದ್ದಾರೆ. ಉತ್ತರಖಂಡದಲ್ಲಿಯೂ ಕಾಂಗ್ರೆಸ್-ಎಸ್ಪಿ ಒಂದಾಗಿ ತೆರೆಮರೆಯಲ್ಲಿ ಆಟವಾಡ್ತಿದೆ ಎಂದು ಮೋದಿ ಆರೋಪಿಸಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...