alex Certify
ಕನ್ನಡ ದುನಿಯಾ       Mobile App
       

Kannada Duniya

2019 ರ ಹಣೆಬರಹ ಹೇಳುತ್ತೆ ಗುಜರಾತ್ ಫಲಿತಾಂಶ

ಇಂದು ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕೂಡ ನಡೆಯುತ್ತಿದೆ. ಆದ್ರೆ ಗುಜರಾತ್ ವಿಧಾನಸಭೆ ಮೇಲೆ ಎಲ್ಲರ ಕಣ್ಣಿದೆ. 2019ರ ಸಾರ್ವಜನಿಕ ಚುನಾವಣೆಗೆ ಇದು ಅಡಿಪಾಯ ಎಂಬುದು ಸಾರ್ವಜನಿಕರಿಂದ ಹಿಡಿದು ರಾಜಕೀಯ ಪಕ್ಷಗಳ ನಂಬಿಕೆಯಾಗಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಾಸ್ತವವಾಗಿ ಗುಜರಾತ್ ಚುನಾವಣೆಗಲ್ಲ ಬದಲಾಗಿ 2019ರ ಲೋಕಸಭೆ ಚುನಾವಣೆಗೆ ಯುದ್ಧಭೂಮಿ ಸಿದ್ಧಪಡಿಸುತ್ತಿದ್ದಾರೆ. ವಿಮರ್ಶಕರ ಪ್ರಕಾರ ಬಿಜೆಪಿ ಹಾಗೂ ಕಾಂಗ್ರೆಸ್ ಗೆ ಗುಜರಾತ್ ಚುನಾವಣೆ ಅಡಿಗಲ್ಲು. ಗುಜರಾತ್ ಗೆಲುವಿನ ಮೇಲೆ 2019ರ ಚುನಾವಣೆ ನಿಂತಿದೆ. ಇಡೀ ದೇಶವೇ ಗುಜರಾತ್ ಫಲಿತಾಂಶವನ್ನು ಎದುರು ನೋಡ್ತಿದೆ. ಎರಡೂ ಪಕ್ಷಗಳು ಗುಜರಾತನ್ನು ಪ್ರತಿಷ್ಠೆಯ ಕಣವಾಗಿ ಸ್ವೀಕರಿಸಿದ್ದು, ಗೆಲುವಿನ ನಿರೀಕ್ಷೆಯಲ್ಲಿವೆ.

1998ರಿಂದ ಬಿಜೆಪಿ ಶಕ್ತಿ ಕೇಂದ್ರವಾಗಿರುವ ಗುಜರಾತ್ ನಲ್ಲಿ ಈ ಬಾರಿಯೂ ಗೆಲುವು ಕಮಲದ್ದಾದ್ರೆ ಮೋದಿ ನೀತಿಗೆ ಜನರಿಂದ ಬೆಂಬಲ ಸಿಕ್ಕಿದೆ ಎಂದರ್ಥ. ಒಂದು ವೇಳೆ ಬಿಜೆಪಿ ಗುಜರಾತ್ ನಲ್ಲಿ ಸೋಲುಂಡಲ್ಲಿ ನರೇಂದ್ರ ಮೋದಿ ತವರಿನಲ್ಲಿಯೇ ಅವರ ನೀತಿಗೆ ಬೆಂಬಲ ಸಿಕ್ಕಿಲ್ಲ ಎಂಬ ಸಂದೇಶ ರವಾನೆಯಾಗುವುದ್ರಲ್ಲಿ ಎರಡು ಮಾತಿಲ್ಲ. ದೇಶ ಮೋದಿ ನೀತಿಯನ್ನು ಹೇಗೆ ಸ್ವೀಕರಿಸಿದೆ ಎಂಬುದು ಈ ಗೆಲುವಿನ ಮೇಲೆ ನಿಂತಿದೆ. ಕಾಂಗ್ರೆಸ್ ಗೆದ್ದಲ್ಲಿ ಮುಂದಿನ ಚುನಾವಣೆಗೆ  ಸಂಜೀವಿನಿಯಾಗಲಿದೆ.

ಗುಜರಾತ್ ಚುನಾವಣೆ ಗೆಲುವು 2019ರ ಚುನಾವಣೆಯ ಸ್ಪಷ್ಟ ಚಿತ್ರಣವಾಗಲಿದೆ. ಹಾಗಾಗಿಯೇ ಇದನ್ನು ಸೆಮಿಫೈನಲ್ ಎಂದು ಪರಿಗಣಿಸಲಾಗಿದೆ. ನರೇಂದ್ರ ಮೋದಿ 28,119 ಹಾಗೂ ರಾಹುಲ್ ಗಾಂಧಿ 20,010 ಕಿಲೋಮೀಟರ್ ಸಂಚರಿಸಿ ಪ್ರಚಾರ ಮಾಡಿದ್ದೇ ಇದಕ್ಕೆ ಸ್ಪಷ್ಟ ಉದಾಹರಣೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...