alex Certify
ಕನ್ನಡ ದುನಿಯಾ       Mobile App
       

Kannada Duniya

ಮೋದಿ ಅವರ ಫೋಟೋವನ್ನೇ ತಿರುಚಿದ ಪತ್ರಕರ್ತ !

18925289-0241-4117-b51a-3488c23ac49d

ಪ್ರಧಾನಿ ನರೇಂದ್ರ ಮೋದಿ ಅವರು ಸೌದಿ ಅರೇಬಿಯಾದಿಂದ ಯಶಸ್ವಿ ಪ್ರವಾಸ ಮುಗಿಸಿ ಮರಳಿದ್ದು ಈ ನಡುವೆ ಪತ್ರಕರ್ತರೊಬ್ಬರು ಮೋದಿ ಅವರು ಸೌದಿ ಅರೇಬಿಯಾದ ದೊರೆ ಸಲ್ಮಾನ್‌ ಅವರ ಪಾದ ಸ್ಪರ್ಶಿಸಲು ಬಗ್ಗಿರುವ ರೀತಿಯಲ್ಲಿರುವ ತಿರುಚಿದ ಫೋಟೋವೊಂದನ್ನು ಫೇಸ್‌ ಬುಕ್‌ ನಲ್ಲಿ ಪ್ರಕಟಿಸಿ ವಿವಾದಕ್ಕೆ ಕಾರಣರಾಗಿದ್ದಾರೆ.

ಈ ಹಿಂದೆ ಬಿಜೆಪಿ ವರಿಷ್ಠ ನಾಯಕ ಲಾಲ್ ಕೃಷ್ಣ ಅಡ್ವಾಣಿಯವರ ಕಾಲಿಗೆ ಮೋದಿ ಬೀಳಲು ಬಗ್ಗಿರುವ ಫೋಟೋ ಬಳಸಿ, ಅಡ್ವಾಣಿ ಜಾಗದಲ್ಲಿ ಸೌದಿ ಅರೇಬಿಯಾದ ದೊರೆ ಸಲ್ಮಾನ್‌ ಅವರನ್ನು ಈ ಫೋಟೋದಲ್ಲಿ ಚಿತ್ರಿಸಿ ಪತ್ರಕರ್ತರೊಬ್ಬರು ಫೇಸ್‌ ಬುಕ್‌ ನಲ್ಲಿ ಪ್ರಕಟಿಸಿದ್ದರು.

ಬಳಿಕ ಅವರು ಕ್ಷಮೆ ಯಾಚಿಸಿದ್ದರಾದರೂ ಅವರ ವರ್ತನೆಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿದ್ದು ಬಿಜೆಪಿ ಸಂಸದ ಮಹೇಶ್‌ ಗಿರಿ ಅವರು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಗಮನಕ್ಕೆ ತಂದಿದ್ದರು. ಬಿಜೆಪಿಯ ತಾಂತ್ರಿಕ ಘಟಕ ದೆಹಲಿ ಸೈಬರ್ ಪೊಲೀಸರಿಗೆ ಈ ಕುರಿತು ದೂರು ನೀಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...