alex Certify
ಕನ್ನಡ ದುನಿಯಾ       Mobile App
       

Kannada Duniya

ಮೋದಿಯವರನ್ನು ಹಾಡಿ ಹೊಗಳಿದ ಕಾಂಗ್ರೆಸ್ ನಾಯಕ

p-chi

ನವದೆಹಲಿ: ಉತ್ತರ ಪ್ರದೇಶ ಮತ್ತು ಉತ್ತರಾಖಂಡ್ ನಲ್ಲಿ ಬಿ.ಜೆ.ಪಿ. ಪ್ರಚಂಡ ಜಯ ಸಾಧಿಸಿರುವುದಕ್ಕೆ, ಪ್ರಧಾನಿ ನರೇಂದ್ರ ಮೋದಿಯೇ ಕಾರಣ ಎಂದು ಪಕ್ಷದ ಮುಖಂಡರು, ಕೆಲವು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ.

ಆದರೆ, ಇದೇ ಮಾತನ್ನು ಬೇರೆ ಪಕ್ಷಗಳ ನಾಯಕರೂ ಹೇಳಿದ್ದಾರೆ. ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಪ್ರಕಟವಾದ ದಿನ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಪಾರ್ಟಿ ಮುಖಂಡ ಒಮರ್ ಅಬ್ದುಲ್ಲಾ, ಉತ್ತರ ಪ್ರದೇಶದಲ್ಲಿ ಮೋದಿ ಸುನಾಮಿ ಸೃಷ್ಠಿಸಿದ್ದಾರೆ ಎಂದು ಹೇಳಿದ್ದರು.

ಬಿ.ಜೆ.ಪಿ. ಹೊರತಾದ ಪಕ್ಷಗಳು 2019 ರ ಲೋಕಸಭೆ ಚುನಾವಣೆಯನ್ನು ಮರೆತು ಬಿಡುವುದು ಒಳ್ಳೆಯದು. ಏನಿದ್ದರೂ, 2024 ರ ಚುನಾವಣೆ ಬಗ್ಗೆ ತಲೆ ಕೆಡಿಸಿಕೊಳ್ಳಬೇಕೆಂದು ಸಲಹೆ ನೀಡಿದ್ದರು.

ಈಗ ಕಾಂಗ್ರೆಸ್ ನಾಯಕ, ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಅವರು, ಮೋದಿಯವರನ್ನು ಹಾಡಿ ಹೊಗಳಿದ್ದಾರೆ. ಉತ್ತರ ಪ್ರದೇಶ, ಉತ್ತರಾಖಂಡ್ ನಲ್ಲಿ ಬಿ.ಜೆ.ಪಿ. ಭರ್ಜರಿ ಗೆಲುವಿನೊಂದಿಗೆ ಇತಿಹಾಸ ಸೃಷ್ಠಿಸಿರುವುದರ ಬಗ್ಗೆ ಹೇಳಿಕೆ ನೀಡಿರುವ ಚಿದಂಬರಂ, ಮೋದಿ ಪ್ರಭಾವಿ ನಾಯಕ ಎಂದು ಕೊಂಡಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...