alex Certify
ಕನ್ನಡ ದುನಿಯಾ       Mobile App
       

Kannada Duniya

“ಬಡವರು ಸಾಲ ತೀರಿಸಿದ್ರೆ, ಶ್ರೀಮಂತರು ಸಾಲ ಪಡೆದು ಓಡಿ ಹೋಗ್ತಾರೆ’’

ನರೇಂದ್ರ ಮೋದಿ ಸರ್ಕಾರ 2015ರಲ್ಲಿ ಮುದ್ರಾ ಯೋಜನೆಯನ್ನು ಶುರು ಮಾಡಿದೆ. ದೇಶದಾದ್ಯಂತ ಸಣ್ಣ ಹಾಗೂ ಮಧ್ಯಮ ವರ್ಗದ ವ್ಯಾಪಾರಿಗಳಿಗೆ ಸಾಲ ನೀಡಿ ನೆರವಾಗಿದೆ. ಪ್ರಧಾನಿ ನರೇಂದ್ರ ಮೋದಿ ಈಗ ನಮೋ ಆ್ಯಪ್ ಹಾಗೂ ವಿಡಿಯೋ ಕಾನ್ಫರೆನ್ಸ್ ಮೂಲಕ ಯೋಜನೆಯ ಲಾಭ ಪಡೆದವರ ಜೊತೆ ಮಾತನಾಡ್ತಿದ್ದಾರೆ.

ಎನ್ಡಿಎ ಸರ್ಕಾರ ನಾಲ್ಕು ವರ್ಷ ಪೂರೈಸಿದ್ದು, ನರೇಂದ್ರ ಮೋದಿ ಸರ್ಕಾರಿ ಯೋಜನೆಗಳ ಫಲಾನುಭವಿಗಳ ಜೊತೆ ಮಾತುಕತೆ ನಡೆಸ್ತಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಸಾರ್ವಜನಿಕರ ಬಳಿ ಬಂದು ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಸೋಮವಾರ ಉಜ್ವಲ ಯೋಜನೆ ಫಲಾನುಭವಿಗಳ ಜೊತೆ ನರೇಂದ್ರ ಮೋದಿ ಮಾತನಾಡಿದ್ದರು. ಇಂದು ಮುದ್ರಾ ಯೋಜನೆ ಫಲಾನುಭವಿಗಳ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ಬೆಳಿಗ್ಗೆ 9 ಗಂಟೆಯಿಂದ ಮೋದಿ ಲೈವ್ ನಲ್ಲಿದ್ದಾರೆ.

ಮುದ್ರಾ ಯೋಜನೆ ಬಗ್ಗೆ ಮಾತನಾಡಿದ ನರೇಂದ್ರ ಮೋದಿ ಹಿಂದಿನ ಸರ್ಕಾರ ಸಮಾಜದಲ್ಲಿ ಗುರುತಿಸಿಕೊಂಡವರಿಗೆ ಮಾತ್ರ ಸಾಲ ನೀಡುತ್ತಿತ್ತು. ದೊಡ್ಡ ವ್ಯಕ್ತಿಗಳಿಗೆ ಸಾಲ ನೀಡುವಂತೆ ವಿತ್ತ ಸಚಿವರೇ ಸೂಚನೆ ನೀಡುತ್ತಿದ್ದರು. ಆದ್ರೆ ಮಧ್ಯಮ ಹಾಗೂ ಸಣ್ಣ ಉದ್ಯಮಿಗಳಿಗೆ ನೆರವಾಗಲು ಮುದ್ರಾ ಯೋಜನೆ ಶುರು ಮಾಡಿದ್ದೇವೆ. ಈವರೆಗೆ 6 ಲಕ್ಷಕ್ಕೂ ಹೆಚ್ಚು ಸಾಲ ನೀಡಿದ್ದೇವೆ. ಮುದ್ರಾ ಯೋಜನೆಯಲ್ಲಿ ಹೆಚ್ಚಾಗಿ ಮಹಿಳೆಯರು, ದಲಿತರು ಹಾಗೂ ಬಡವರಿಗೆ ಸಾಲ ನೀಡಲಾಗಿದೆ ಎಂದು ಮೋದಿ ಹೇಳಿದ್ದಾರೆ. ಸಣ್ಣ ಹಾಗೂ ಮಧ್ಯಮ ವರ್ಗದ ಉದ್ಯಮಿಗಳು ಸಾಲಕ್ಕೆ ಸರಿಯಾಗಿ ಬಡ್ಡಿ ತುಂಬಿ ಸಾಲ ತೀರಿಸಿ, ಗೌರವದಿಂದ ಬದುಕುತ್ತಾರೆ. ಆದ್ರೆ ದೊಡ್ಡ ವ್ಯಕ್ತಿಗಳು ಸಾಲ ಪಡೆದು ಓಡಿ ಹೋಗ್ತಾರೆಂದು ಮೋದಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...