alex Certify
ಕನ್ನಡ ದುನಿಯಾ       Mobile App
       

Kannada Duniya

ಹುಟ್ಟುಹಬ್ಬದಂದು ತಾಯಿ ಆಶೀರ್ವಾದ ಪಡೆದ ಮೋದಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ 67ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ತವರು ಗುಜರಾತ್ ಗೆ ತೆರಳಿರುವ ಮೋದಿ ಗಾಂಧಿನಗರದಲ್ಲಿರುವ ತಮ್ಮ ಮನೆಗೆ ಭೇಟಿ ನೀಡಿ ತಾಯಿಯ ಆಶೀರ್ವಾದ ಪಡೆದ್ರು. ಪ್ರತಿ ವರ್ಷದಂತೆ ಈ ವರ್ಷವೂ ಹೀರಾಬೆನ್ ಆಶೀರ್ವಾದ ಪಡೆದ ಮೋದಿ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳನ್ನು ಮುಂದುವರೆಸಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಗ್ಗೆ ದೇಶವೊಂದೇ ಅಲ್ಲ ಇಡೀ ಜಗತ್ತು ತಿಳಿದುಕೊಳ್ಳಲು ಬಯಸುತ್ತದೆ. ಮೋದಿ ಆರೋಗ್ಯ ಹಾಗೂ ಸರಳ ಜೀವನವನ್ನು ಬಹುತೇಕರು ಇಷ್ಟಪಡ್ತಾರೆ. 67 ವರ್ಷವಾದ್ರೂ ಆರೋಗ್ಯಕರ ಹಾಗೂ ಆ್ಯಕ್ಟಿವ್ ಆಗಿರುವ ಮೋದಿ ಗುಟ್ಟು ಯೋಗ.

ಸೆಪ್ಟೆಂಬರ್ 17,1950ರಂದು ವಿದ್ ನಗರದಲ್ಲಿ ಮೋದಿ ಜನಿಸಿದ್ರು. ಗುಜರಾತ್ ರಾಜ್ಯದಲ್ಲಿರುವ ವಿದ್ ನಗರ್ ಆಗ ಮುಂಬೈ ಭಾಗವಾಗಿತ್ತು. ನರೇಂದ್ರ ಮೋದಿ ಹುಟ್ಟು ಹಾಗೂ ಅವರ ಸಾಧನೆ ಬಗ್ಗೆ ಎಲ್ಲರಿಗೂ ಗೊತ್ತು. ಆದ್ರೆ ಸದಾ ಆ್ಯಕ್ಟಿವ್ ಆಗಿರುವ ಮೋದಿ ದಿನಚರಿ ಹೇಗಿರುತ್ತೆ ಎಂಬುದರ ವಿವರ ಇಲ್ಲಿದೆ.

ತಾವೂ ಹೆಚ್ಚಿನ ಸಮಯ ನಿದ್ರೆ ಮಾಡದ ಮೋದಿ ಬೇರೆಯವರಿಗೂ ಹೆಚ್ಚಿನ ಸಮಯ ನಿದ್ರೆ ಮಾಡೋಕೆ ಕೊಡೋದಿಲ್ಲ. ಇದನ್ನು ನಾವು ಹೇಳ್ತಿಲ್ಲ. 2014ರಲ್ಲಿ ಈಗಿನ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದರು.

ತಡ ರಾತ್ರಿಯವರೆಗೆ ಕೆಲಸ ಮಾಡಿದ ನಂತ್ರ ಹಾಸಿಗೆಗೆ ಹೋಗುವ ಮೋದಿ ನಿದ್ರೆ ಮಾಡೋದು ಕೇವಲ 3-4 ಗಂಟೆ ಮಾತ್ರ. ಬೆಳಗಿನ ಜಾವ ನಾಲ್ಕು ಗಂಟೆಗೇ ಹಾಸಿಗೆ ಬಿಡುವ ಮೋದಿ ಮತ್ತೆ ಮಲಗೋದು ರಾತ್ರಿಯೇ. ಅವ್ರಿಗೆ ಬೆಳಗಿನ ಸಮಯದಲ್ಲಿ ನಿದ್ರೆ ಮಾಡೋದು ಇಷ್ಟವಾಗೋದಿಲ್ಲ.

ಬೆಳಿಗ್ಗೆ ಎದ್ದ ನಂತ್ರ ಅರ್ಧ ಗಂಟೆ ಯೋಗ, ಪ್ರಾಣಾಯಾಮ, ಸೂರ್ಯ ನಮಸ್ಕಾರ ಧ್ಯಾನ ಮಾಡ್ತಾರೆ ಮೋದಿ. ಇದು ಅವ್ರ ದಿನಚರಿಯ ಪ್ರಮುಖ ಭಾಗ.

ನಂತ್ರ ಪೇಪರ್ ಹಾಗೂ ಇ-ಮೇಲ್ ಚೆಕ್ ಮಾಡ್ತಾರೆ. ಅವಶ್ಯವಿದ್ದರೆ ಇ-ಮೇಲ್ ಗೆ ಉತ್ತರ ನೀಡ್ತಾರೆ ಮೋದಿ. ಬೆಳಿಗ್ಗೆ 7 ಗಂಟೆಯವರೆಗೆ ದೇಶ ಹಾಗೂ ಪ್ರಪಂಚದ ಎಲ್ಲ ಸುದ್ದಿಗಳನ್ನು ಪೇಪರ್ ಮೂಲಕ ಓದಿ ತಿಳಿದುಕೊಳ್ತಾರೆ.

ಕಡಿಮೆ ಉಪಹಾರ ಸೇವನೆ ಮಾಡುವ ಮೋದಿಗೆ ರುಚಿ ರುಚಿ ಟೀ ಬೇಕೇಬೇಕು. ಊಟದಲ್ಲಿಯೂ ಹೆಚ್ಚಿಗೆ ಎಣ್ಣೆಯಿರುವ ಆಹಾರ ಇಷ್ಟಪಡೋದಿಲ್ಲ ಮೋದಿ. ಮಾಧ್ಯಮಗಳೊಂದಿಗೆ ಉತ್ತಮ ಸಂಬಂಧ ಹೊಂದಿರುವ ಮೋದಿ ರಾತ್ರಿ 10 ಗಂಟೆಯಿಂದ 12 ಗಂಟೆಯವರೆಗೆ ಬೇರೆ ಬೇರೆ ಚಾನೆಲ್ ನಲ್ಲಿ ಬರುವ ಸಂದರ್ಶನಗಳನ್ನು ನೋಡ್ತಾರೆ. ಊಟ ಮಾಡುವಾಗ ಕೂಡ ಟಿವಿ ನೋಡ್ತಾರೆ ಮೋದಿ.

ಸಮಯಕ್ಕೆ ಹೆಚ್ಚಿನ ಬೆಲೆ ನೀಡುವ ಮೋದಿ ಸರಿಯಾದ ಸಮಯಕ್ಕೆ ಕಚೇರಿಗೆ ಹೋಗ್ತಾರೆ. ಬೆಳಿಗ್ಗೆ 11.30ಕ್ಕೆ ಊಟ ಮಾಡ್ತಾರೆ ಮೋದಿ. ಅವ್ರ ಕುಕ್ ಅವ್ರಿಗೆ ಊಟ ಮಾಡಿ ಬಡಿಸ್ತಾರೆ. ವಿದೇಶಕ್ಕೆ ಹೋಗುವಾಗ ಕೂಡ ಅವ್ರು ಮೋದಿ ಜೊತೆ ಹೋಗ್ತಾರೆ.

4.30ರ ಸುಮಾರಿಗೆ ಟೀ ಕುಡಿಯುವ ಮೋದಿ ಇದ್ರ ಜೊತೆ ಬಿಸ್ಕಿಟ್ ಇಷ್ಟಪಡ್ತಾರೆ. ಸುಮಾರು 14 ಗಂಟೆಗಳ ಕಾಲ ಕಚೇರಿಯಲ್ಲಿ ಕೆಲಸ ಮಾಡುವ ಮೋದಿ ರಾತ್ರಿ 10 ಗಂಟೆಗೆ ಊಟ ಮಾಡ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...