alex Certify
ಕನ್ನಡ ದುನಿಯಾ       Mobile App
       

Kannada Duniya

ನರೇಂದ್ರ ಮೋದಿ ಶ್ರೀರಾಮನ ಅವತಾರ ಎಂದು ಬಣ್ಣಿಸಿದ ಬಿಜೆಪಿ ಶಾಸಕ

ಪ್ರಧಾನಿ ನರೇಂದ್ರ ಮೋದಿಯವರು ಶ್ರೀ ರಾಮನ ಅವತಾರವೆಂದು ಬಣ್ಣಿಸಿರುವ ಉತ್ತರ ಪ್ರದೇಶದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್, ರಾಮರಾಜ್ಯದ ಕನಸನ್ನು ಸಾಕಾರ ಮಾಡಲೆಂದೇ ಅವರು ಬಂದಿದ್ದಾರೆ ಎಂದು ತಿಳಿಸಿದ್ದಾರೆ.

ಅಷ್ಟೇ ಅಲ್ಲ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ರನ್ನು ಲಕ್ಷ್ಮಣನಿಗೆ ಹೋಲಿಕೆ ಮಾಡಿರುವ ಸುರೇಂದ್ರ ಸಿಂಗ್, ಆ ದೇವರು ರಾಮನ ಸಹೋದರ ಲಕ್ಷ್ಮಣನ ರೂಪದಲ್ಲಿ ಅಮಿತ್ ಶಾ ರನ್ನು ಕಳುಹಿಸಿಕೊಟ್ಟಿದ್ದು, ಅಮಿತ್ ಶಾ ಚಾಣಕ್ಯ ಕೂಡಾ ಆಗಿದ್ದಾರೆಂದಿದ್ದಾರೆ.

ಇನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಹನುಮನ ರೂಪದಲ್ಲಿ ಇವರ ಜೊತೆಗೂಡಿದ್ದು, ಕಾಕತಾಳೀಯವೆಂದರೆ ಆದಿತ್ಯನಾಥ್ ಕೂಡಾ ಹನುಮನಂತೆ ಬ್ರಹ್ಮಚಾರಿಯಾಗಿದ್ದಾರೆ. ಈ ತ್ರಿಮೂರ್ತಿಗಳು ದೇಶವನ್ನು ರಾಮರಾಜ್ಯ ಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲವೆಂದು ಸುರೇಂದ್ರ ಸಿಂಗ್ ತಿಳಿಸಿದ್ದಾರೆ.

ಸುರೇಂದ್ರ ಸಿಂಗ್, ಈ ಹಿಂದೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ಶೂರ್ಪನಖಿಗೆ ಹೋಲಿಸಿ ವಿವಾದಕ್ಕೊಳಗಾಗಿದ್ದರು. ಈಗ ನರೇಂದ್ರ ಮೋದಿ, ಅಮಿತ್ ಶಾ ಹಾಗೂ ಯೋಗಿ ಆದಿತ್ಯನಾಥ್ ರನ್ನು ರಾಮ, ಲಕ್ಷ್ಮಣ ಮತ್ತು ಹನುಮನಿಗೆ ಹೋಲಿಸಿ ಮತ್ತೆ ಸುದ್ದಿಯಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...