alex Certify
ಕನ್ನಡ ದುನಿಯಾ       Mobile App
       

Kannada Duniya

ಮುಂಚೂಣಿ ದೇಶವಾಗಿ ಭಾರತ, ಮೋದಿ ವಿಶ್ವಾಸ

modi-ind nir

ನವದೆಹಲಿ: 70ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ, ನವದೆಹಲಿಯ ಕೆಂಪು ಕೋಟೆಯ ಮೇಲೆ ಪ್ರಧಾನಿ ನರೇಂದ್ರ ಮೋದಿ, 3ನೇ ಬಾರಿಗೆ ಧ್ವಜಾರೋಹಣ ಮಾಡಿ, ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ

ಈ ಸಂದರ್ಭದಲ್ಲಿ ಸುದೀರ್ಘ ಭಾಷಣ ಮಾಡಿದ ಮೋದಿ, ಭಾರತ ಮುನ್ನಡೆ ಸಾಧಿಸುತ್ತಿದೆ. ದೇಶದ ಅಭಿವೃದ್ಧಿಗೆ ಮಹಿಳೆಯರು, ಸಾರ್ವಜನಿಕರ ಪಾತ್ರ ಪ್ರಮುಖ. ದೇಶದ ಎಲ್ಲಾ ನಾಗರೀಕರು ಕೈ ಜೋಡಿಸಬೇಕೆಂದು ಕರೆ ನೀಡಿದ್ದಾರೆ. ಅಭಿವೃದ್ಧಿಯತ್ತ ಮುನ್ನಡೆಯಲು ಜಿ.ಎಸ್.ಟಿ. ನಮಗೆ ಸಹಕಾರಿಯಾಗಲಿದೆ. ವಿಶ್ವದ ದೊಡ್ಡ ದೇಶಗಳನ್ನು ಹಿಂದಿಕ್ಕಿ ನಾವು ಮುನ್ನಡೆ ಸಾಧಿಸಲಿದ್ದೇವೆ. ಟಾಪ್ ದೇಶಗಳ ಸಾಲಿನಲ್ಲಿ ನಾವು 3ನೇ ಸ್ಥಾನಕ್ಕೇರಲಿದ್ದೇವೆ. ವಿಶ್ವಸಂಸ್ಥೆಯೂ ಇದನ್ನು ಹೇಳಿದೆ ಎಂದು ಮೋದಿ ತಿಳಿಸಿದ್ದಾರೆ.

‘ಭೇಟಿ ಬಚಾವೋ, ಭೇಟಿ ಪಡಾವೋ’, ‘ಸುಕನ್ಯಾ ಸಮೃದ್ಧಿ’, ಮುದ್ರಾ ಯೋಜನೆಗಳು ಹೆಣ್ಣುಮಕ್ಕಳ ಅಭ್ಯುದಯಕ್ಕೆ ಕಾರಣವಾಗಿವೆ. ದೇಶ ಮುನ್ನಡೆಯಲು ಪ್ರತಿಯೊಬ್ಬ ನಾಗರೀಕರು ಸಹಕಾರ ನೀಡಬೇಕೆಂದು ಮನವಿ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...