alex Certify
ಕನ್ನಡ ದುನಿಯಾ       Mobile App
       

Kannada Duniya

ಯುಟ್ಯೂಬ್ ನಲ್ಲಿ ಪ್ರಧಾನಿ ಮೋದಿ ಯೋಗ ಪಾಠ

ಯೋಗ ಭಾರತದಲ್ಲೇ ಜನ್ಮ ತಳೆದ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸ ಅಥವಾ ಶಿಸ್ತು. ಈ ಹಿಂದೆ ಹಿಮಾಲಯ ಪರ್ವತದಲ್ಲಿರುವ ಸಾಧು-ಸಂತರಿಗೆ ಮಾತ್ರ ಯೋಗಾಸನ ಸೀಮಿತವಾಗಿತ್ತು. ಆದ್ರೀಗ ಪ್ರತಿಯೊಬ್ಬರ ಬದುಕಿನ ಅವಿಭಾಜ್ಯ ಅಂಗವಾಗಿದೆ.

ವೈದ್ಯರು, ಡಯಟಿಶಿಯನ್ ಗಳು ಕೂಡ ಯೋಗಾಸನ ಮಾಡುವಂತೆ ಸಲಹೆ ನೀಡುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಸಹ ಆಗಾಗ ಯೋಗದಿಂದ ಇರುವ ಪ್ರಯೋಜನಗಳ ಬಗ್ಗೆ ಮಾತನಾಡ್ತಾರೆ. ವಿಶ್ವ ಯೋಗ ದಿನಾಚರಣೆಯನ್ನು ಜಾರಿಗೆ ತಂದ ಶ್ರೇಯ ಕೂಡ ಅವರಿಗೇ ಸಲ್ಲುತ್ತದೆ.

ಮನ್ ಕಿ ಬಾತ್ ನಲ್ಲಿ ಮಾತನಾಡಿದ ಮೋದಿ, ಮನೆಮನೆಯಲ್ಲೂ ಯೋಗಾಭ್ಯಾಸ ಮಾಡುವ ಮೂಲಕ ಫಿಟ್ ಇಂಡಿಯಾ ನಿರ್ಮಾಣಕ್ಕೆ ಸಹಕರಿಸುವಂತೆ ಮನವಿ ಮಾಡಿದ್ದರು. ಇದೀಗ ಮೋದಿ ಅವರೇ ಯುಟ್ಯೂಬ್ ನಲ್ಲಿ ಪಾಠ ಮಾಡ್ತಿದ್ದಾರೆ. ಹೌದು, ಮೋದಿ ಅವರ ಆ್ಯನಿಮೇಟೆಡ್ ವಿಡಿಯೋ ತಯಾರಿಸಿ ವಿವಿಧ ಆಸನಗಳನ್ನು ಪ್ರದರ್ಶಿಸಲಾಗಿದೆ.

ಸ್ವಯಂಸೇವಕರ ತಂಡವೊಂದು ಈ ವಿಡಿಯೋ ತಯಾರಿಸಿದೆ. ಇದನ್ನು ಪ್ರಧಾನಿ ಮೋದಿ ಕೂಡ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಯುವಕರ ಪ್ರತಿಭೆಯನ್ನು ಕೊಂಡಾಡಿದ್ದಾರೆ. ಯುಟ್ಯೂಬ್ ನಲ್ಲೂ ಈ ವಿಡಿಯೋ ಲಭ್ಯವಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...