alex Certify
ಕನ್ನಡ ದುನಿಯಾ       Mobile App
       

Kannada Duniya

ಹೈದ್ರಾಬಾದ್ ಜನತೆಗೆ ಮೆಟ್ರೋ ನೀಡಿದ ಮೋದಿ

ಹೈದ್ರಾಬಾದ್ ಗೆ ತೆರಳಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೈದ್ರಾಬಾದ್ ಮೆಟ್ರೋಗೆ ಚಾಲನ ನೀಡಿದ್ದಾರೆ. ಈ ವೇಳೆ ಮೋದಿ ಜೊತೆ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಉಪಸ್ಥಿತರಿದ್ದರು. ನವೆಂಬರ್ 29ರಿಂದ ಮೆಟ್ರೋ ಸಾರ್ವಜನಿಕರಿಗೆ ಲಭ್ಯವಾಗಲಿದೆ.

ಮೊದಲ ಹಂತದಲ್ಲಿ ನಾಗೋಲ್-ಮಿಯಾಪುರ್ ಮಧ್ಯೆ 30 ಕಿಲೋಮೀಟರ್ ಮೆಟ್ರೋ ಸಂಚಾರ ಶುರುವಾಗಲಿದೆ. ಇದ್ರಲ್ಲಿ ಒಟ್ಟು 24 ನಿಲ್ದಾಣವಿರಲಿದೆ. ಹೈದ್ರಾಬಾದ್ ಮೆಟ್ರೋ ಉದ್ಘಾಟನೆ ನಂತ್ರ ಮೋದಿ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಶೃಂಗಸಭೆ ನಂತ್ರ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಗಳು ಇವಾಂಕ ಟ್ರಂಪ್ ಜೊತೆ ಭೋಜನ ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ.

ಇದಕ್ಕೂ ಮುನ್ನ ಹೈದ್ರಾಬಾದ್ ಗೆ ಬಂದಿಳಿದ ನರೇಂದ್ರ ಮೋದಿಯವರನ್ನು ಬಿಜೆಪಿ ನಾಯಕರು ಸ್ವಾಗತಿಸಿದ್ರು. ಈ ವೇಳೆ ಮಾತನಾಡಿದ ಮೋದಿ ವಿಶ್ವದ ಕಣ್ಣು ಇಂದು ಹೈದ್ರಾಬಾದ್ ಮೇಲಿದೆ. ಜಗತ್ತಿನ ದೊಡ್ಡ ದೊಡ್ಡ ಉದ್ಯಮಿಗಳು ಇಂದು ಹೈದ್ರಾಬಾದ್ ಗೆ ಬಂದಿದ್ದಾರೆ. ಲಕ್ಷಾಂತರ ಕಾರ್ಯಕರ್ತರ ಶ್ರಮದಿಂದ ಇಂದು ಬಿಜೆಪಿ ವಿಶ್ವದ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...