alex Certify
ಕನ್ನಡ ದುನಿಯಾ       Mobile App
       

Kannada Duniya

ಸೂರತ್ ನಲ್ಲಿ 11 ಕಿಲೋಮೀಟರ್ ರೋಡ್ ಶೋ ನಡೆಸಿದ ಪಿಎಂ

new760_1492351391_749x421

ಎರಡು ದಿನಗಳ ಗುಜರಾತ್ ಪ್ರವಾಸದಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೂರತ್ ತಲುಪಿದ್ದಾರೆ. ಸೂರತ್ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಮೋದಿ ರೋಡ್ ಶೋ ಶುರುವಾಯ್ತು. 11 ಕಿಲೋಮೀಟರ್ ರೋಡ್ ಶೋ ನಡೆಸಿದ ಮೋದಿ, ಸರ್ಕ್ಯೂಟ್ ಹೌಸ್ ಬರ್ತಾ ಇದ್ದಂತೆ ರೋಡ್ ಶೋ ಮುಗಿಸಿದ್ರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಸತತ ಮೂರು ಗಂಟೆಗಳ ಕಾಲ ರೋಡ್ ಶೋನಲ್ಲಿ ಪಾಲ್ಗೊಂಡಿದ್ದರು. ಪ್ರಧಾನಿ ಪಟ್ಟಕ್ಕೇರಿದ ನಂತ್ರ ಇದೇ ಮೊದಲ ಬಾರಿ ಮೋದಿ ಸೂರತ್ ಪ್ರವಾಸ ಕೈಗೊಂಡಿದ್ದು, ಪಿಎಂಗೆ ಸೂರತ್ ನಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ .

ಮೋದಿ ಆಗಮನದ ಹಿನ್ನೆಲೆಯಲ್ಲಿ ಮಧುವಣಗಿತ್ತಿಯಂತೆ ಸೂರತ್ ಸಿಂಗಾರಗೊಂಡಿತ್ತು. ಎಲ್ಲೆಲ್ಲೂ ಮೋದಿ ಕಟೌಟ್ ರಾರಾಜಿಸ್ತಾ ಇದೆ. ವಿಮಾನ ನಿಲ್ದಾಣದಿಂದ ಸರ್ಕ್ಯೂಟ್ ಹೌಸ್ ವರೆಗೆ 11 ಕಿಲೋಮೀಟರ್ ಉದ್ದಕ್ಕೂ ಮೋದಿ ಕಟೌಟ್ ಗಳಿವೆ. ಸ್ವಚ್ಛ ಭಾರತ ಅಭಿಯಾನ, ಮೇಕ್ ಇನ್ ಇಂಡಿಯಾದಂತ ಯೋಜನೆಗಳು ಪೋಸ್ಟರ್ ನಲ್ಲಿ ಕಾಣಸಿಗ್ತಾ ಇವೆ. 40 ಅಡಿ ಎತ್ತರದ ಮೋದಿ ಕಟೌಟ್ ಕೂಡ ಹಾಕಲಾಗಿದ್ದು,ಇದು ಮೋದಿಯವರ ಅತ್ಯಂತ ಎತ್ತರದ ಕಟೌಟ್ ಎನ್ನಲಾಗ್ತಾ ಇದೆ. ಸರ್ಕ್ಯೂಟ್ ಹೌಸ್ ನಲ್ಲಿ ಮೋದಿ ತಂಗಿದ್ದು, ಸೋಮವಾರ ಅನೇಕ ಕಾರ್ಯಕ್ರಮಗಳಲ್ಲಿ ಪಿಎಂ ಪಾಲ್ಗೊಳ್ಳಲಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...