alex Certify
ಕನ್ನಡ ದುನಿಯಾ       Mobile App
       

Kannada Duniya

ನೆದರ್ಲ್ಯಾಂಡ್ ನಲ್ಲಿ ಸೈಕಲ್ ಏರಿದ ಮೋದಿ

modi-2_555_062817094338

ಮೂರು ದೇಶಗಳ ಪ್ರವಾಸ ಮುಗಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾರತಕ್ಕೆ ವಾಪಸ್ ಆಗಿದ್ದಾರೆ. ಪೋರ್ಚುಗಲ್, ಅಮೆರಿಕಾ ಹಾಗೂ ನೆದರ್ಲೆಂಡ್ ಪ್ರವಾಸದಿಂದ ವಾಪಸ್ ಆಗಿರುವ ಮೋದಿ ಅಲ್ಲಿನ ಸುಂದರ ಕ್ಷಣಗಳ ಫೋಟೋಗಳನ್ನು ಟ್ವೀಟರ್ ಅಕೌಂಟ್ ಗೆ ಹಾಕಿದ್ದಾರೆ. ಸೈಕಲ್ ಮೇಲೆ ಕುಳಿತಿರುವ ಫೋಟೋ ಹಾಕಿರುವ ಮೋದಿ ಸೈಕಲ್ ನೀಡಿದ್ದಕ್ಕೆ ಧನ್ಯವಾದ ಮಾರ್ಕ್ ರುಟ್ಟೆ ಎಂದು ಟ್ವಿಟ್ ಮಾಡಿದ್ದಾರೆ.

ಡಚ್ ಪ್ರಧಾನಿ ಮಾರ್ಕ್ ರುಟ್ಟೆ ಭೇಟಿ ಮಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೂರು ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ನೆದರ್ಲ್ಯಾಂಡ್ ಹಾಗೂ ಭಾರತದ ಸಂಬಂಧ ಹಳೆಯದಾಗಿದ್ದು, ಈ ವರ್ಷ ಉಭಯ ದೇಶಗಳು ರಾಜ ತಾಂತ್ರಿಕ ಸಂಬಂಧದ 70ನೇ ವಾರ್ಷಿಕೋತ್ಸವವನ್ನು ಆಚರಿಸ್ತಾ ಇವೆ. 2015 ಜೂನ್ ನಲ್ಲಿ ನೆದರ್ಲ್ಯಾಂಡ್ ಪ್ರಧಾನಿ ಭಾರತಕ್ಕೆ ಬಂದಿದ್ದರು. ಸರಿಯಾಗಿ ಎರಡು ವರ್ಷಕ್ಕೆ ಭಾರತದ ಪ್ರಧಾನಿ ನೆದರ್ಲ್ಯಾಂಡ್ ಗೆ ಭೇಟಿ ನೀಡಿದ್ದಾರೆ.

ಉಭಯ ದೇಶದ ನಾಯಕರು ಅನೇಕ ವಿಷಯಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ. ಮೋದಿಗೆ ಮಾರ್ಕ್ ಸ್ವಾಗತ ಕೋರಿದ ರೀತಿ ಸಾಕಷ್ಟು ಚರ್ಚೆಯಾಗಿದೆ. ಹಿಂದಿ ಭಾಷೆಯಲ್ಲಿ ಮೋದಿಗೆ ಸ್ವಾಗತ ಕೋರಿ ಟ್ವೀಟ್ ಮಾಡಿದ್ದರು ಮಾರ್ಕ್. ಹಾಗೆ ನೆದರ್ಲ್ಯಾಂಡ್ ಗೆ ಬಂದ ಮೋದಿಗೆ ಉಡುಗೊರೆ ರೂಪದಲ್ಲಿ ಸೈಕಲ್ ನೀಡಿದ್ದಾರೆ ಮಾರ್ಕ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...