alex Certify
ಕನ್ನಡ ದುನಿಯಾ       Mobile App
       

Kannada Duniya

ನರೇಂದ್ರ ಮೋದಿ ಆಪ್ ನಲ್ಲೂ ಡೇಟಾ ಸೋರಿಕೆ…?

ನರೇಂದ್ರ ಮೋದಿ ಆಂಡ್ರಾಯ್ಡ್ ಆ್ಯಪ್ ನಲ್ಲಿ ಬಳಕೆದಾರರ ಅನುಮತಿಯಿಲ್ಲದೇ ವೈಯಕ್ತಿಕ ಮಾಹಿತಿಗಳನ್ನು ಸೋರಿಕೆ ಮಾಡಲಾಗ್ತಿದೆ ಎಂಬ ಆರೋಪ ಕೇಳಿಬಂದಿದೆ. ಕ್ಲೆವರ್ ಟ್ಯಾಪ್ ಎಂಬ ಅಮೆರಿಕದ ಕಂಪನಿಗೆ ಬಳಕೆದಾರರ ವೈಯಕ್ತಿಕ ವಿವರಗಳನ್ನು ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಫ್ರಾನ್ಸ್ ನ ಭದ್ರತಾ ಸಂಶೋಧಕ ಎಲಿಯಟ್ ಆಲ್ಡರ್ಸನ್ ಈ ಆಘಾತಕಾರಿ ವಿವರವನ್ನು ಹೊರಹಾಕಿದ್ದಾರೆ. ನರೇಂದ್ರ ಮೋದಿ ಆಂಡ್ರಾಯ್ಡ್ ಆ್ಯಪ್ ನಲ್ಲಿ ಬಳಕೆದಾರರು ತಮ್ಮ ಪ್ರೊಫೈಲ್ ಕ್ರಿಯೇಟ್ ಮಾಡುತ್ತಿದ್ದಂತೆ, ಅವರ ಡಿವೈಸ್ ವಿವರ ಹಾಗೂ ವೈಯಕ್ತಿಕ ಡೇಟಾವನ್ನು in.wzrkt.com. ಗೆ ಕಳಿಸಲಾಗುತ್ತಿದೆಯಂತೆ.

ಇದು ಅಮೆರಿಕದ ಕಂಪನಿಗೆ ಸೇರಿದ ವೆಬ್ ಸೈಟ್. ಬಳಕೆದಾರರು ಆಪರೇಟ್ ಮಾಡುತ್ತಿರುವ ಸಾಫ್ಟ್ ವೇರ್, ನೆಟ್ವರ್ಕ್ ಟೈಪ್, ಕೆರಿಯರ್, ಹೆಸರು, ಫೋಟೋ, ಇಮೇಲ್ ವಿಳಾಸ ಹೀಗೆ ಪ್ರತಿಯೊಂದು ವಿವರವೂ ಮೂರನೇ ವ್ಯಕ್ತಿಯ ಕೈಸೇರುತ್ತಿದೆ ಅಂತಾ ಎಲಿಯಟ್ ಹೇಳಿದ್ದಾರೆ. ಈ ಮಾಹಿತಿ ಆ್ಯಪ್ ಬಳಕೆದಾರರಲ್ಲಿ ಆತಂಕ ಹುಟ್ಟುಹಾಕಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...