alex Certify
ಕನ್ನಡ ದುನಿಯಾ       Mobile App
       

Kannada Duniya

ಎನ್.ಟಿ.ಆರ್. ಪುತ್ರನ ಸಾವಿಗೆ ಕಾರಣವಾಯ್ತಾ ಈ ಅಂಶ?

ಹೈದರಾಬಾದ್‌: ನಟ ಹಾಗೂ ರಾಜಕೀಯ ಮುಖಂಡ ನಂದಮೂರಿ ಹರಿಕೃಷ್ಣ ಅಪಘಾತ ಸಂಭವಿಸಿದ ವೇಳೆ ಸೀಟ್‌ ಬೆಲ್ಟ್ ಹಾಕಿಕೊಂಡಿರಲಿಲ್ಲ ಎಂಬುದು ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ.

ಬುಧವಾರ ಬೆಳಗ್ಗೆ ನಡೆದ ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟ ಹರಿಕೃಷ್ಣ, ಅತಿವೇಗವಾಗಿ ಕಾರು ಚಲಾಯಿಸುತ್ತಿದ್ದರು. ಸೀಟ್‌ ಬೆಲ್ಟ್ ಹಾಕಿಕೊಂಡಿರಲಿಲ್ಲ. ವೇಗವಾಗಿ ಚಾಲನೆ ಮಾಡುವ ವೇಳೆ ಹಠಾತ್ ತಿರುವು ಎದುರಾಗಿದ್ದು, ಕಾರು ನಿಯಂತ್ರಣ ತಪ್ಪಿ ತಡೆಗೋಡೆಗೆ ಬಡಿದಿದೆ. ಕಾರಿನಲ್ಲಿದ್ದ ಹರಿಕೃಷ್ಣ ಅವರ ಸ್ನೇಹಿತರು ಅಪಘಾತದ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ನಲಗೊಂಡ ಎಸ್‌.ಪಿ. ಎ.ವಿ. ರಂಗನಾಥ್‌ ತಿಳಿಸಿದ್ದಾರೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ ಡಿವೈಡರ್‌ಗೆ ಬಡಿದ ಕಾರು ಹಾರಿ ರಸ್ತೆಯ ಮತ್ತೊಂದು ಭಾಗಕ್ಕೆ ಬಿದ್ದಿದೆ. ಈ ವೇಳೆ ಕಾರಿನ ಬಲಭಾಗದ ಬಾಗಿಲು ತೆರೆದುಕೊಂಡಿದ್ದು, ಹರಿಕೃಷ್ಣ ಕಾರಿನಿಂದ ಹೊರಕ್ಕೆ ಎಸೆಯಲ್ಪಟ್ಟಿದ್ದಾರೆ. ಹೀಗಾಗಿ ಅವರಿಗೆ ಗಂಭೀರ ಗಾಯಗಳಾಗಿ ಕೊನೆಯುಸಿರೆಳಿದಿದ್ದಾರೆ. ಸೀಟ್‌ ಬೆಲ್ಟ್ ಹಾಕಿಕೊಂಡಿದ್ದರೆ ಅವರು ಬದುಕುವ ಸಾಧ್ಯತೆ ಹೆಚ್ಚಿತ್ತು ಎಂದು ರಂಗನಾಥ್‌ ಹೇಳಿದ್ದಾರೆ.

ಅಪಘಾತ ವೇಳೆ ಕಾರಿನ ವೇಗ ಇತ್ಯಾದಿ ಮಾಹಿತಿಗಳನ್ನು ಸುತ್ತಮುತ್ತಲ ಸಿಸಿ ಟಿವಿಯಿಂದ ಪಡೆಯಲಾಗುತ್ತಿದೆ. ರಸ್ತೆಯ ನಿರ್ಮಾಣದಲ್ಲೂ ದೋಷ ಗುರುತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...