alex Certify
ಕನ್ನಡ ದುನಿಯಾ       Mobile App
       

Kannada Duniya

40 ವರ್ಷದಿಂದ ಈ ವ್ಯಕ್ತಿ ಬೆತ್ತಲೆ ತಿರುಗಲು ಕಾರಣವೇನು?

naked2-1

ಒಂದಲ್ಲ ಎರಡಲ್ಲ ಬರೋಬ್ಬರಿ 40 ವರ್ಷಗಳಿಂದ ಈತ ಬಟ್ಟೆ ತೊಟ್ಟಿಲ್ಲ. ಹಾಗಂತ ಈತ ಸಾಧುವೇನಲ್ಲ. ಧ್ಯಾನ ಮಾಡುವುದಿಲ್ಲ. ಎಲ್ಲರ ಜೊತೆ ಬೆರೆಯುತ್ತಾನೆ. ಸೈಕಲ್ ಹೊಡೆಯುತ್ತಾನೆ. ಟೀ ಅಂಗಡಿಗೆ ಹೋಗ್ತಾನೆ. ಜನರ ಜೊತೆ ಮಾತನಾಡ್ತಾನೆ. ಆ ಊರಿನ ಅಚ್ಚುಮೆಚ್ಚಿನ ವ್ಯಕ್ತಿ.

ಬಟ್ಟೆಯಿಲ್ಲದೆ ವಿವಸ್ತ್ರವಾಗಿ ಸಂಚರಿಸುವ ಈ ವ್ಯಕ್ತಿ ಹೆಸರು ಸುಬಲ್ ಬೆರ್ಮನ್. ವಯಸ್ಸು 45 ವರ್ಷ. ಪಶ್ಚಿಮ ಬಂಗಾಳದ ಕುಚ್ಬಿಹಾರ್ ಜಿಲ್ಲೆಯ ರಾಜಪುರ ಹಳ್ಳಿಯವನು. ಹಳ್ಳಿಯ ಪ್ರತಿಯೊಬ್ಬರೂ ಈತನ ಬಗ್ಗೆ ತಿಳಿದಿದ್ದಾರೆ. ಈತ ವಿವಸ್ತ್ರನಾಗಿ ಸಂಚರಿಸಿದ್ರೆ ಹಳ್ಳಿಯ ಯಾರೂ ವಿರೋಧ ವ್ಯಕ್ತಪಡಿಸುವುದಿಲ್ಲ.

ವಾಸ್ತವವಾಗಿ ಸುಬಲ್ 5 ವರ್ಷದವನಿದ್ದಾಗ ಅವನ ಮೈ ಮೇಲೆ ಕಪ್ಪು ಕಲೆ ಕಾಣಿಸಿಕೊಂಡಿತ್ತು. ಸುಟ್ಟಂತೆ ಚರ್ಮ ಉರಿಯುತ್ತಿತ್ತಂತೆ. ವೈದ್ಯರಿಗೆ ತೋರಿಸಿದಾಗ ಇದು ಅಲರ್ಜಿ ಎಂದಿದ್ದಾರೆ. ಬಟ್ಟೆ ಧರಿಸಿದ್ರೆ ಅಲರ್ಜಿಯಾಗುತ್ತೆ ಎಂದು ವೈದ್ಯರು ಹೇಳಿದ ನಂತ್ರ ಸುಬಲ್ ಬಟ್ಟೆ ಧರಿಸುವುದನ್ನು ಬಿಟ್ಟಿದ್ದಾನೆ. ಸುಬಲ್ ಮನೆಯಲ್ಲಿ ಚಿಕಿತ್ಸೆಗೆ ಹಣವಿರಲಿಲ್ಲ. ಹಾಗಾಗಿ ಈ ಅಲರ್ಜಿ ರೋಗಕ್ಕೆ ಸೂಕ್ತ ಚಿಕಿತ್ಸೆ ಸಿಗಲಿಲ್ಲ.

ಮೊದ ಮೊದಲು ಮುಜುಗರಕ್ಕೊಳಗಾಗ್ತಿದ್ದ ಸುಬಲ್ ಗೆ ನಂತ್ರ ಇದು ಸಾಮಾನ್ಯವಾಗಿಬಿಟ್ಟಿದೆ. ಹಳ್ಳಿ ಸುತ್ತುವ ಸುಬಲ್ ಮದುವೆ ಸಮಾರಂಭಗಳಿಗೂ ಹೋಗ್ತಾನೆ. ದೇವಸ್ಥಾನಕ್ಕೆ ಹೋಗಲು ಈತನಿಗೆ ಒಪ್ಪಿಗೆ ಸಿಕ್ಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...