alex Certify
ಕನ್ನಡ ದುನಿಯಾ       Mobile App
       

Kannada Duniya

ಕೈ ತುಂಬಾ ಸಂಬಳ ಬರುವ ಕೆಲಸ ಬಿಟ್ಟು ಚಹಾ ಮಾರಲು ಹೊರಟ ಟೆಕ್ಕಿಗಳು..!

ಯಾರದ್ದೋ ಕೈ ಕೆಳಗೆ ಕೆಲಸ ಮಾಡೋದಕ್ಕಿಂತ ಸ್ವಂತ ಉದ್ಯೋಗ ಮಾಡಬೇಕೆನ್ನುವುದು ಅನೇಕರ ಕನಸು. ಹೀಗೆ ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ನಾಗ್ಪುರದಲ್ಲಿ ಜೋಡಿಯೊಂದು ಎಂಜಿನಿಯರ್ ಕೆಲಸ ಬಿಟ್ಟು ಚಹಾ ಮಾರಲು ಹೊರಟಿದೆ.

ನಿತಿನ್ ಬಿಯಾನಿ ಹಾಗೂ ಪತ್ನಿ ಪೂಜಾ ಇಬ್ಬರೂ ಸಾಫ್ಟ್ ವೇರ್ ಎಂಜಿನಿಯರ್ ಗಳು. ಪ್ರತಿ ತಿಂಗಳು 15 ಲಕ್ಷ ಕೈ ಸೇರುತ್ತಿತ್ತು. ಆದರೆ ಈ ಕೆಲಸ ಬಿಟ್ಟು ಇಬ್ಬರೂ ಸೇರಿ ನಾಗ್ಪುರದ ಸಿಎ ರೋಡ್ ನಲ್ಲಿ ಚಾಯ್ ವಿಲ್ಲಾ, ರಿಫ್ರೆಶ್ ಯುವರ್ ಸೆಲ್ಫ್ ಅನ್ನೋ ಟೀ ಶಾಪ್ ತೆರೆದಿದ್ದಾರೆ.

ಇಲ್ಲಿ 15 ಕ್ಕೂ ಹೆಚ್ಚು ವಿಧದ ಟೀ ಹಾಗೂ ಸ್ನ್ಯಾಕ್ಸ್ ಸಿಗುತ್ತೆ. ಅಲ್ಲದೇ ಬೇರೆ ಬೇರೆ ಆರ್ಡರ್ ಕೂಡ ತೆಗೆದುಕೊಳ್ಳುತ್ತಾರೆ. ಈ ಯುವ ಜೋಡಿ ಸ್ವಂತ ಬ್ಯುಸಿನೆಸ್ ಶುರುಮಾಡಿ ಕೇವಲ 5 ತಿಂಗಳಾಗಿದ್ದು, ಸದ್ಯ ತಿಂಗಳಿಗೆ 5 ಲಕ್ಷ ರೂ. ಗಳಿಸುತ್ತಿದ್ದಾರಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...