alex Certify
ಕನ್ನಡ ದುನಿಯಾ       Mobile App
       

Kannada Duniya

ಪೊಲೀಸ್ ಠಾಣೆಯಲ್ಲೇ ಗಾಂಜಾ ದರೋಡೆ ಮಾಡಿವೆ ಇಲಿಗಳು..!

rat

ನೀವು ಕನಸು ಮನಸಿನಲ್ಲೂ ಊಹಿಸಿಕೊಳ್ಳಲಾಗದಂತಹ ಘಟನೆ ಇದು. ನಾಗ್ಪುರದಲ್ಲಿ ರೈಲ್ವೆ ಪೊಲೀಸರ ವಶದಲ್ಲಿದ್ದ 25 ಕೆಜಿ ಗಾಂಜಾ ನಾಪತ್ತೆಯಾಗಿದೆಯಂತೆ. ಅಷ್ಟಕ್ಕೂ ಅದನ್ನು ದರೋಡೆ ಮಾಡಿದವರ್ಯಾರು ಗೊತ್ತಾ? ಇಲಿಗಳು. ಹೌದು ಇಲಿಗಳೇ 25 ಕೆಜಿ ಗಾಂಜಾ ಕದ್ದೊಯ್ದಿವೆ ಅಂತಾ ನಾಗ್ಪುರದ ರೈಲ್ವೆ ಪೊಲೀಸರು ಆರೋಪ ಮಾಡಿದ್ದಾರೆ.

ಅಷ್ಟೇ ಅಲ್ಲ ದಾಸ್ತಾನು ಮಾಡಿದ್ದ ಅಪಾರ ಪ್ರಮಾಣದ ಮದ್ಯ ಕೂಡ ಗಾಯಬ್ ಆಗಿದೆಯಂತೆ. ಅದಕ್ಕೂ ಇಲಿಗಳೇ ಕಾರಣ ಎನ್ನುತ್ತಿದ್ದಾರೆ ಹಿರಿಯ ಇನ್ಸ್ ಪೆಕ್ಟರ್ ಅಭಯ್ ಪನ್ಹೇಕರ್. ಇಲಿಗಳು ಮದ್ಯದ ಬಾಟಲಿಗಳನ್ನು ಒಡೆದಿದ್ರಿಂದ ಎಲ್ಲವೂ ಚೆಲ್ಲಿ ಹೋಗಿರಬಹುದು ಅನ್ನೋದು ಅವರ ಅನುಮಾನ. ಗಾಂಜಾ ಇಟ್ಟಿದ್ದ ಚೀಲವನ್ನು ಕಚ್ಚಿ ಹರಿದ ಇಲಿಗಳು ಎಲ್ಲವನ್ನೂ ಸ್ವಾಹಾ ಮಾಡಿವೆ ಎನ್ನುತ್ತಿದ್ದಾರೆ.

ಸದ್ಯದಲ್ಲೇ ಪೊಲೀಸ್ ಠಾಣೆಯ ಸ್ಟೋರ್ ರೂಮ್ ನಲ್ಲಿ ಸಿಸಿ ಟಿವಿ ಅಳವಡಿಸಲು ಹಿರಿಯ ಅಧಿಕಾರಿಗಳು ಮುಂದಾಗಿದ್ದಾರೆ. ಸಿಸಿ ಟಿವಿ ನೋಡಿ ಬೆದರಿ ಇಲಿಗಳು ಬಹುಷಃ ಕಳ್ಳತನ ನಿಲ್ಲಿಸಬಹುದು ಅನ್ನೋ ಲೆಕ್ಕಾಚಾರ ಅಧಿಕಾರಿಗಳದ್ದಿರಬಹುದು ಅಂತಾ ಎಲ್ಲರೂ ಹಾಸ್ಯ ಮಾಡ್ತಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...