alex Certify
ಕನ್ನಡ ದುನಿಯಾ       Mobile App
       

Kannada Duniya

ಅಪ್ಪ ಬ್ಯಾಗ್, ಪುಸ್ತಕ ಕೊಡಿಸಲಿಲ್ಲವೆಂದು ದುಡುಕಿದ ಬಾಲಕ

closeup of the feet of a dead body covered with a sheet, with a blank tag tied on the big toe of his left foot, in monochrome, with a vignette added

ನಾಗ್ಪುರದಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ತಂದೆ ಬ್ಯಾಗ್ ಮತ್ತು ಪುಸ್ತಕ ಕೊಡಿಸಿಲ್ಲ ಅಂತಾ ಮನನೊಂದು 7ನೇ ತರಗತಿ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶಾಲೆ ಆರಂಭವಾಗಿ ಆಗ್ಲೇ ತಿಂಗಳು ಕಳೆದಿದ್ರಿಂದ ಆದಷ್ಟು ಬೇಗ ಬ್ಯಾಗ್ ಮತ್ತು ಪುಸ್ತಕ ಕೊಂಡೊಯ್ಯಬೇಕೆಂದು ಬಾಲಕ ಅಂದುಕೊಂಡಿದ್ದ.

ಬ್ಯಾಗ್ ಮತ್ತು ಪುಸ್ತಕವನ್ನು ಕೂಡಲೇ ತಂದುಕೊಡುವಂತೆ ಅಪ್ಪನ ಬಳಿ ಕೇಳಿದ್ದಾನೆ. ಹಣದ ಅಡಚಣೆ ಇದ್ದಿದ್ರಿಂದ ಇನ್ನರೆಡು ದಿನಗಳಲ್ಲಿ ತಂದು ಕೊಡುವುದಾಗಿ ಹೇಳಿದ ತಂದೆ ಹೊಲದ ಕೆಲಸಕ್ಕೆ ತೆರಳಿದ್ರು. ಅಷ್ಟಕ್ಕೇ ನೊಂದ ಬಾಲಕ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಪುಸ್ತಕ ಮತ್ತು ಬ್ಯಾಗ್ ತರುವಂತೆ ಶಾಲೆಯಿಂದ್ಲೂ ಒತ್ತಡವಿತ್ತು ಎನ್ನಲಾಗಿದೆ. ಆದ್ರೆ ಶಾಲೆಯ ಶಿಕ್ಷಕರು ಇದನ್ನು ನಿರಾಕರಿಸಿದ್ದು, ಬಡ ಮಕ್ಕಳಿಗೆ ಬ್ಯಾಗ್ ಮತ್ತು ಪುಸ್ತಕ ಖರೀದಿಗೆ ಎಲ್ಲರಿಂದ್ಲೂ ಹಣ ಸಂಗ್ರಹಿಸಿ ಕೊಡುತ್ತಿರುವುದಾಗಿ ಹೇಳಿದ್ದಾರೆ. ವಿದ್ಯಾರ್ಥಿಯೊಬ್ಬನನ್ನು ಕಳೆದುಕೊಂಡಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...