alex Certify
ಕನ್ನಡ ದುನಿಯಾ       Mobile App
       

Kannada Duniya

ಹೈದರಾಬಾದ್ ಏರ್ಪೋರ್ಟ್ ನಿಂದ ಕಾಣೆಯಾದಾಕೆ ಗೋವಾದಲ್ಲಿ ಪತ್ತೆ

khairavi-sharma-3467ಪುಣೆಗೆ ಹೋಗಬೇಕಾಗಿದ್ದ ನೌಕಾದಳದ ಅಧಿಕಾರಿಯೊಬ್ಬರ 17 ವರ್ಷದ ಪುತ್ರಿಯೊಬ್ಬಳು ಹೈದರಾಬಾದ್ ವಿಮಾನ ನಿಲ್ದಾಣದಿಂದ ಕಾಣೆಯಾಗಿದ್ದು, ಇದೀಗ ಗೋವಾದಲ್ಲಿ ಪತ್ತೆಯಾಗಿದ್ದಾಳೆ.

ವಿಶಾಖಪಟ್ಟಣದಲ್ಲಿ ನೌಕಾದಳದ ಅಧಿಕಾರಿಯಾಗಿರುವ ಅರವಿಂದ್ ಶರ್ಮಾ ಅವರ ಪುತ್ರಿ ಖೈರವಿ ಶರ್ಮಾ, ಪುಣೆಯ ತನ್ನ ಅಜ್ಜ- ಅಜ್ಜಿ ಮನೆಯಲ್ಲಿದ್ದುಕೊಂಡು ಕಾಲೇಜು ವ್ಯಾಸಂಗ ಮಾಡುತ್ತಿದ್ದಳು. ವಿಶಾಖಪಟ್ಟಣದಲ್ಲಿದ್ದ ತನ್ನ ತಂದೆ- ತಾಯಿಯ ಬಳಿಗೆ ಬಂದಿದ್ದ ಖೈರವಿ ಶರ್ಮಾ, ಬುಧವಾರದಂದು ಪುಣೆಗೆ ತೆರಳಲು ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಬಂದಿದ್ದಳು.

ಆದರೆ ಆಕೆ ಪುಣೆ ತಲುಪಿರಲಿಲ್ಲವೆನ್ನಲಾಗಿದ್ದು, ಹಾಗಾಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆಕೆಯ ಮೊಬೈಲ್ ಫೋನ್ ನ ಕಡೆಯ ಲೋಕೇಶನ್ ಫಿರೋಜ್ ಗೂಡಾ ತೋರಿಸುತ್ತಿದ್ದು ಬಳಿಕ ಸ್ವಿಚಾಫ್ ಆಗಿತ್ತು. ಪೊಲೀಸರು ಹುಡುಗಿಯ ನಾಪತ್ತೆ ಕುರಿತು ಎಲ್ಲೆಡೆ ಮಾಹಿತಿ ನೀಡಿದ್ದರು. ಶುಕ್ರವಾರದಂದು ಆಕೆ ಗೋವಾದಲ್ಲಿ ಪತ್ತೆಯಾಗಿದ್ದು, ಇದೀಗ ತನ್ನ ತಂದೆ- ತಾಯಿ ಬಳಿಗೆ ಸುರಕ್ಷಿತವಾಗಿ ಮರಳಿದ್ದಾಳೆಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...