alex Certify
ಕನ್ನಡ ದುನಿಯಾ       Mobile App
       

Kannada Duniya

ಆ ಹಳ್ಳಿಯಲ್ಲಿ ಆಕಾಶದಿಂದ ಬಿದ್ದಿದೆ ನಿಗೂಢ ವಸ್ತು..!

sky-1

ತಮಿಳುನಾಡಿನ ಕೂತಂಪೂಡಿಯ ನಿವಾಸಿಗಳಿಗೆಲ್ಲ ಈಗ ಸಿಕ್ಕಾಪಟ್ಟೆ ಕುತೂಹಲ. ಆಕಾಶದಿಂದ ಸಿಲಿಂಡರ್ ಆಕಾರದ ವಸ್ತುವೊಂದು ಬಿದ್ದಿರುವುದೇ ಇದಕ್ಕೆ ಕಾರಣ. ಆ ನಿಗೂಢ ವಸ್ತು ರಾಕೆಟ್ ನ ಭಾಗವಾಗಿರಬಹುದು ಎನ್ನಲಾಗ್ತಿದೆ. ಯಾಕಂದ್ರೆ ಅದು ರಾಕೆಟ್ ನ ಇಂಧನ ಟ್ಯಾಂಕ್ ನಂತಿದೆ. ಆದ್ರೆ ಈ ಬಗ್ಗೆ ಯಾವುದೇ ಸ್ಪಷ್ಟತೆಯಿಲ್ಲ.

ಕೂತಂಪೂಡಿಯಲ್ಲಿ ಸಿಕ್ಕ ನಿಗೂಢ ವಸ್ತುವನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಪರೀಕ್ಷೆ ಮುಗಿದ ಮೇಲಷ್ಟೆ ನಿಗೂಢ ವಸ್ತುವಿನ ಬಗ್ಗೆ ನಿಖರ ಮಾಹಿತಿ ಸಿಗಲಿದೆ ಅಂತಾ ಅಧಿಕಾರಿಗಳು ತಿಳಿಸಿದ್ದಾರೆ. ನಿಗೂಢ ವಸ್ತು ಆಕಾಶದಿಂದ ಬಿದ್ದಿದೆ ಅನ್ನೋ ಸುದ್ದಿ ಕೇಳಿ ಜನ ತಂಡೋಪತಂಡವಾಗಿ ಈ ಊರಿಗೆ ಬರ್ತಿದ್ದಾರೆ. ಎಲ್ಲರಲ್ಲೂ ಅದೇನಿರಬಹುದು ಅನ್ನೋ ಕುತೂಹಲ ಹೆಚ್ಚಾಗಿದೆ. ಇನ್ನೊಂದ್ಕಡೆ ಅಧಿಕಾರಿಗಳು ಕೂಡ ಏನಾದ್ರೂ ಸುಳಿವು ಸಿಗಬಹುದು ಅನ್ನೋ ಲೆಕ್ಕಾಚಾರದಲ್ಲಿ ಕೂತಂಪೂಡಿಗೆ ಬಂದು ಹೋಗ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...