alex Certify
ಕನ್ನಡ ದುನಿಯಾ       Mobile App
       

Kannada Duniya

ಯುಪಿ ಶಾಸಕರ ಸೋದರಳಿಯನ ಗೂಂಡಾಗಿರಿ

slap

ಉತ್ತರಪ್ರದೇಶದಲ್ಲಿ ಸಮಾಜವಾದಿ ಶಾಸಕನ ಸೋದರಳಿಯನೊಬ್ಬ ಪೊಲೀಸ್ ಅಧಿಕಾರಿಗೆ ಕಪಾಳಮೋಕ್ಷ ಮಾಡಿದ್ದಾನೆ. ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಲ್ಲದೆ, ಬೆದರಿಕೆ ಕೂಡ ಹಾಕಿದ್ದಾನೆ. 24 ವರ್ಷದ ಮೋಹಿತ್ ಯಾದವ್ ಈ ಕೃತ್ಯ ಎಸಗಿದ ಯುವಕ. ಸಬ್ ಇನ್ಸ್ ಪೆಕ್ಟರ್ ಜಿತೇಂದ್ರ ಯಾದವ್ ಅವರ ಕೆನ್ನೆಗೆ ಈತ ಬಾರಿಸಿದ್ದಾನೆ.

ಕೂಡಲೇ ಪೊಲೀಸರು ಆತನನ್ನ ಹಿಡಿದುಕೊಳ್ಳಲು ಮುಂದಾದ್ರು. ಆಗ ಓರ್ವ ಪೊಲೀಸ್ ಅಧಿಕಾರಿಯ ಕಾಲರ್ ಹಿಡಿದು ದರ್ಪ ತೋರಿದ್ದಾನೆ. ಕರ್ತವ್ಯದಲ್ಲಿದ್ದ ಅಧಿಕಾರಿ ಮೇಲೆ ಹಲ್ಲೆ ಮತ್ತು ನಿಂದನೆ ಆರೋಪದಡಿ ಕೇಸ್ ದಾಖಲಿಸಿ ಆತನನ್ನು ಬಂಧಿಸಲಾಗಿದೆ. ಈತ ಸಮಾಜವಾದಿ ಪಕ್ಷದ ಶಾಸಕ ರಮೇಶ್ ಯಾದವ್ ಅವರ ಸೋದರಳಿಯ.

ಈತನ ತಂದೆ ಗನ್ ಅಂಗಡಿಯೊಂದನ್ನು ನಡೆಸುತ್ತಿದ್ದು, ಮೋಹಿತ್ ನಿರುದ್ಯೋಗಿ. ಸಂಬಂಧಿಯೊಂದಿಗೆ ಆಸ್ಪತ್ರೆಗೆ ಬಂದಿದ್ದ ಮೋಹಿತ್, ವಿಐಪಿ ಟ್ರೀಟ್ಮೆಂಟ್ ಗಾಗಿ ಒತ್ತಾಯಿಸಿದ್ದಾನೆ. ತನ್ನ ಸರದಿಗಾಗಿ ಕಾಯದೆ ಮೊದಲು ತಮಗೇ ಎಕ್ಸರೇ ಮಾಡುವಂತೆ ಆಗ್ರಹಿಸಿದ್ದ. ಅವರು ಒಪ್ಪದೇ ಇದ್ದಾಗ ಲ್ಯಾಬ್ ಸಿಬ್ಬಂದಿ ಮತ್ತು ವೈದ್ಯರ ಮೇಲೆ ಹಲ್ಲೆ ಮಾಡಿದ್ದ.

ನಂತರ ಆತನನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗುತ್ತಿತ್ತು. ಈ ವೇಳೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಕೆನ್ನೆಗೆ ಬಾರಿಸಿದ್ದಾನೆ. ಆರೋಪಿ ಮೋಹಿತ್ ಕುಡಿದ ಅಮಲಲ್ಲಿ ಈ ಕೃತ್ಯ ಎಸಗಿದ್ದಾನೆ ಅಂತಾ ಅಧಿಕಾರಿಗಳು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...