alex Certify
ಕನ್ನಡ ದುನಿಯಾ       Mobile App
       

Kannada Duniya

ಆತ್ಮಹತ್ಯೆಗೆ ಶರಣಾದ ನ್ಯೂಸ್ ಆ್ಯಂಕರ್

ಹೈದರಾಬಾದಿನ ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ ನ್ಯೂಸ್ ಆ್ಯಂಕರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. 36 ವರ್ಷದ ರಾಧಿಕಾ ರೆಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇವರು ಖಾಸಗಿ ವಾಹಿನಿಯಲ್ಲಿ ನ್ಯೂಸ್ ಆ್ಯಂಕರ್ ಆಗಿದ್ದರು.

ಭಾನುವಾರ ರಾತ್ರಿ ಎಂದಿನಂತೆ ಕೆಲಸ ಮುಗಿಸಿಕೊಂಡು ಮೂಸಾಪೇಟೆಯಲ್ಲಿರುವ ತಮ್ಮ ಅಪಾರ್ಟ್ಮೆಂಟ್ ಗೆ ಬಂದ ರಾಧಿಕಾ ರೆಡ್ಡಿ, ನೇರವಾಗಿ ಐದನೇ ಅಂತಸ್ತಿಗೆ ತೆರಳಿ ಅಲ್ಲಿಂದ ಕೆಳಗೆ ಹಾರಿದ್ದಾರೆ. ತಲೆಗೆ ತೀವ್ರವಾಗಿ ಪೆಟ್ಟು ಬಿದ್ದ ಕಾರಣ ರಾಧಿಕಾ ರೆಡ್ಡಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ರಾಧಿಕಾ ರೆಡ್ಡಿಯವರ ಬ್ಯಾಗ್ ನಲ್ಲಿ ಸೂಸೈಡ್ ನೋಟ್ ದೊರೆತಿದ್ದು, ನನ್ನ ಮೆದುಳೇ ನನಗೆ ಶತ್ರುವಾಯಿತು ಎಂದು ಬರೆದಿದ್ದಾರೆಂದು ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಕುಕ್ಕಟಪಲ್ಲಿ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಆರು ತಿಂಗಳ ಹಿಂದೆ ಪತಿಯಿಂದ ವಿಚ್ಚೇದನ ಪಡೆದುಕೊಂಡಿದ್ದ ರಾಧಿಕಾ ರೆಡ್ಡಿ ತಮ್ಮ 14 ವರ್ಷದ ಪುತ್ರನೊಂದಿಗೆ ಪೋಷಕರ ಜೊತೆ ವಾಸವಾಗಿದ್ದರೆಂದು ಹೇಳಲಾಗಿದೆ. ಖಿನ್ನತೆಯಿಂದ ರಾಧಿಕಾ ರೆಡ್ಡಿ ಬಳಲುತ್ತಿದ್ದು, ಇದೇ ಆತ್ಮಹತ್ಯೆಗೆ ಕಾರಣವಾಗಿರಬಹುದೆಂದು ಶಂಕಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...