alex Certify
ಕನ್ನಡ ದುನಿಯಾ       Mobile App
       

Kannada Duniya

ಮಕ್ಕಳಿಗೆ ಕಾಮ ಪಾಠ ಹೇಳಿಕೊಡುತ್ತಿದ್ದವಳ ಅರೆಸ್ಟ್

ಬಿಹಾರದ ಮುಜಾಫರ್‍ಪುರ್ ಅನಾಥಾಶ್ರಮದಲ್ಲಿ ನಡೆದ ಲೈಂಗಿಕ ಹಗರಣ ಸಂಬಂಧ ಸಿಬಿಐ ಪೊಲೀಸರು ಮಂಗಳವಾರ ಎನ್‍ಜಿಒ ಮ್ಯಾನೇಜರ್ ಸಾಯಿಸ್ತ ಪ್ರವೀಣ್ ಅಲಿಯಾಸ್ ಮಧು ಎಂಬಾಕೆಯನ್ನು ಬಂಧಿಸಿದ್ದಾರೆ. ಈಕೆ ಈ ಅನಾಥಾಶ್ರಮದ ಮಕ್ಕಳಿಗೆ ಹೇಗೆ ಕಾಮಕೇಳಿಯಲ್ಲಿ ತೊಡಗಬೇಕು ಎಂದು ಹೇಳಿಕೊಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಅನಾಥಾಶ್ರಮದಲ್ಲಿನ 30 ಬಾಲಕಿಯರ ಅತ್ಯಾಚಾರ ಸಂಬಂಧ ಪ್ರಮುಖ ಆರೋಪಿಯೊಂದಿಗೆ ಸಂಪರ್ಕ ಹೊಂದಿದ್ದ ಚಂದ್ರಶೇಖರ್ ವರ್ಮಾ ಬಿಹಾರದ ಸಮಾಜ ಕಲ್ಯಾಣ ಇಲಾಖೆಯ ಸಚಿವೆ ಮಂಜು ವರ್ಮಾ ಅವರ ಪತಿ. ಪತಿಯ ವಿರುದ್ಧ ಲೈಂಗಿಕ ಹಗರಣದ ಆರೋಪ ಬಂದಿದ್ದರಿಂದ ಸ್ಥಾನಕ್ಕೆ ರಾಜೀನಾಮೆ ನೀಡಿ, ಪೊಲೀಸರಿಗೆ ಸಿಗದೆ ತಲೆ ಮರೆಸಿಕೊಂಡಿದ್ದರು.

ಆದರೆ ಆಕೆಯನ್ನು ಬಂಧಿಸದ ಬಗ್ಗೆ ಸುಪ್ರೀಂಕೋರ್ಟ್ ನ. 12ರಂದು ಬಿಹಾರದ ಡಿಜಿಪಿಯನ್ನು ತರಾಟೆಗೆ ತೆಗೆದುಕೊಂಡಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ತೀವ್ರ ಶೋಧಕ್ಕೆ ಮುಂದಾಗಿದ್ದರಿಂದ ಮಾಜಿ ಸಚಿವೆ ಮಂಜು ವರ್ಮಾ ಮಂಗಳವಾರ ನ್ಯಾಯಾಲಯಕ್ಕೆ ಶರಣಾಗಿದ್ದಾರೆ. ಇದೇ ಬೆನ್ನಿಗೆ ಸಿಬಿಐ ಪೊಲೀಸರು ಮಧುವನ್ನು ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...