alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಹಾರದ ಈ ಹಳ್ಳಿಯಲ್ಲಿ 30 ವರ್ಷದವರು ವೃದ್ದರಾಗಿದ್ದಾರೆ !

Pension_1251122a

ಬಿಹಾರದಲ್ಲಿ ಒಂದು ಹಳ್ಳಿ ಇದೆ. ಈ ಹಳ್ಳಿಯ ಜನರು 30 ವರ್ಷದ ನಂತರ ವೃದ್ದರಾಗುತ್ತಾರೆ. ಇದಕ್ಕೆ ಕಾರಣ ವೃದ್ಧಾಪ್ಯ ವೇತನ.

ಹೌದು ಇಲ್ಲಿನ ಬಹಳಷ್ಟು ಯುವಕರು ವೃದ್ಧಾಪ್ಯ ವೇತನ ಯೋಜನೆಯ ಅಡಿಯಲ್ಲಿ ಸಿಗುವ ಹಣಕ್ಕೆ ಆಸೆ ಪಟ್ಟು ತಮ್ಮ ವಯಸ್ಸನ್ನು 30 ರಿಂದ 35 ವರ್ಷದವರೆಗೆ ಏರಿಸಿಕೊಂಡಿದ್ದಾರೆ.

ಬಿಹಾರದ ಮುಜಫರ್ ಪುರ ಜಿಲ್ಲೆಯ ಅಮೇಠಿ ಪಂಚಾಯತ್ ನ ವಿಶ್ವಂಭರಪುರ ಹಳ್ಳಿಯ ಜನರು ಕೇವಲ 30 ವರ್ಷಕ್ಕೇ ವೃದ್ಧರಾಗಿಬಿಡುತ್ತಾರೆ. ಮಾಹಿತಿ ಹಕ್ಕು ಕಾಯ್ದೆಯಡಿ ವ್ಯಕ್ತಿಯೊಬ್ಬರು ಪಡೆದ ಮಾಹಿತಿಯಲ್ಲಿ ಇದು ಬಹಿರಂಗವಾಗಿದೆ.

ಸಾಮಾನ್ಯವಾಗಿ ವೃದ್ಧಾಪ್ಯ ವೇತನ, 60 ವರ್ಷ ಹಾಗೂ ಅದಕ್ಕೂ ಮೇಲ್ಪಟ್ಟವರಿಗೆ ಮಾತ್ರ ಸಿಗಬೇಕು. ಇಲ್ಲಿ ಹಾಗಲ್ಲ, ಅಧಿಕಾರಿಗಳೊಂದಿಗೆ ಶಾಮೀಲಾಗಿ ತಮ್ಮ ವಯಸ್ಸನ್ನು ಏಕಾಏಕಿ ಏರಿಸಿಕೊಳ್ಳುತ್ತಿರುವ ಹಲವು ಮಂದಿ ಯುವಕರು, ವೃದ್ದಾಪ್ಯ ವೇತನ ತೆಗೆದುಕೊಳ್ಳುತ್ತಿರುವುದು ಸರಕಾರಿ ವ್ಯವಸ್ಥೆಯಲ್ಲಿನ ಭ್ರಷ್ಟತೆಗೆ ಹಿಡಿದ ಕನ್ನಡಿಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...