alex Certify
ಕನ್ನಡ ದುನಿಯಾ       Mobile App
       

Kannada Duniya

ನೇಣಿಗೆ ಕೊರಳೊಡ್ಡುತ್ತಿದ್ದವಳನ್ನು ರಕ್ಷಿಸಿದ್ದು ಒಂದು ವಿಡಿಯೋ ಕಾಲ್

ತಂದೆ ಹಾಗೂ ಪತಿ ದೌರ್ಜನ್ಯಕ್ಕೆ ಬೇಸತ್ತ ಮೂಕ ಮಹಿಳೆಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿದ್ದಳು. ಒಂದು ಸಂಸ್ಥೆ ಹಾಗೂ ಪೊಲೀಸರು ಆಕೆ ಪ್ರಾಣ ರಕ್ಷಣೆ ಮಾಡಿದ್ದಾರೆ. ಘಟನೆ ನಡೆದಿರುವುದು ರಾಜಸ್ತಾನದ ಹನುಮಾನಗಂಡಿಯಲ್ಲಿ.

ಇಂದೋರ್ ನ ಸಾಂಕೇತಿಕ ಭಾಷಾ ತಜ್ಞ ಜ್ಞಾನೇಂದ್ರನ ಬಳಿ ವಿಡಿಯೋ ಕಾಲ್ ಒಂದು ಬಂದಿದೆ. ಅದ್ರಲ್ಲಿ ಯುವತಿ ತನ್ನ ನೋವನ್ನು ತೋಡಿಕೊಂಡಿದ್ದಾಳೆ. ಜೊತೆಗೆ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾಳೆ. ನೇಣಿಗೆ ಕೊರಳೊಡ್ಡಿ ನಿಂತಿದ್ದ ಯುವತಿ ನೋಡಿ ಕಂಗಾಲಾದ ಜ್ಞಾನೇಂದ್ರ ಆಕೆ ನೋವನ್ನರಿಯುವ ಪ್ರಯತ್ನ ಮಾಡಿದ್ದಾರೆ.

ಪತಿ ಹಾಗೂ ತಂದೆ ಹಿಂಸೆಗೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಯುವತಿ ಹೇಳಿದ್ದಾಳೆ. ಹಿಂದಿನ ದಿನ ಕೂಡ ತಂದೆ ಲೈಂಗಿಕ ಹಿಂಸೆ ನೀಡಿದ್ದಾನೆಂದು ಆಕೆ ಆರೋಪ ಮಾಡಿದ್ದಾಳೆ. ಜ್ಞಾನೇಂದ್ರ ಆಕೆ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ. ಜೊತೆಗೆ ಜ್ಞಾನೇಂದ್ರನ ಸಂಸ್ಥೆಯಲ್ಲಿರುವ ಜನರು ಫೋನ್ ನಂಬರನ್ನು ರಾಜಸ್ತಾನ ಪೊಲೀಸರಿಗೆ ನೀಡಿದ್ದಾರೆ.

ಪ್ರಕರಣದ ಗಂಭೀರತೆ ಅರಿತ ಪೊಲೀಸರು ಯುವತಿ ವಿಳಾಸ ಪತ್ತೆ ಹಚ್ಚಿ ಅಲ್ಲಿಗೆ ಹೋಗಿ ಪ್ರಾಣ ಉಳಿಸಿದ್ದಾರೆ. ಪೊಲೀಸರು ಯುವತಿ ಮನೆ ಸೇರಲು ಸುಮಾರು 4 ಗಂಟೆ ಹಿಡಿದಿದೆ. ಅಲ್ಲಿಯವರೆಗೆ ಜ್ಞಾನೇಂದ್ರ ಮತ್ತು ತಂಡ ಸಾಂಕೇತಿಕ ಭಾಷೆಯಲ್ಲಿ ಆಕೆಯ ಮನವೊಲಿಸುವ ಯತ್ನ ನಡೆಸಿದ್ದರು ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...