alex Certify
ಕನ್ನಡ ದುನಿಯಾ       Mobile App
       

Kannada Duniya

ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?

mukesh-Ambani-houseಭಾರತದ ಅತಿ ದೊಡ್ಡ ಸಿರಿವಂತ ಮುಕೇಶ್ ಅಂಬಾನಿ ಇಂದು ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿರುವ ‘ಅಂಟಿಲ್ಲ’ ಮನೆ ವಿಶ್ವದ ದುಬಾರಿ ಮನೆಗಳ ಪೈಕಿ ಒಂದೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಮನೆಯ ಮೌಲ್ಯ 1 ಬಿಲಿಯನ್ ಡಾಲರ್ ಗಳೆಂದು ಹೇಳಲಾಗಿದೆ.

ಈ ಮನೆಯ ಮೇಲೆ ಹೆಲಿಪ್ಯಾಡ್ ಸೇರಿದಂತೆ ಆನೇಕ ಸೌಲಭ್ಯಗಳಿದ್ದು, ಮನೆಯ ಒಳಾಂಗಣ ವಿನ್ಯಾಸಕ್ಕೇ ನೂರಾರು ಕೋಟಿ ರೂಪಾಯಿಗಳನ್ನು ವ್ಯಯಿಸಲಾಗಿದೆ ಎನ್ನಲಾಗಿದೆ. ಮುಕೇಶ್ ಅಂಬಾನಿಯವರ ಪತ್ನಿ ನೀತಾ ಅಂಬಾನಿ, ಖುದ್ದು ಸ್ವತಃ ತಾವೇ ಮುಂದೆ ನಿಂತು ವಿನ್ಯಾಸವನ್ನು ಮಾಡಿಸಿದ್ದು, ಇದರ ವೈಭವ ಕಣ್ಣು ಕುಕ್ಕುವಂತಿದೆ ಎಂದು ಹೇಳಲಾಗುತ್ತದೆ.

ಆದರೆ 1970 ರ ಅವಧಿಯಲ್ಲಿ ಮುಕೇಶ್ ಅಂಬಾನಿ ಹಾಗೂ ಅನಿಲ್ ಅಂಬಾನಿಯವರ ತಂದೆ ಧೀರೂಬಾಯ್ ಅಂಬಾನಿ ಮುಂಬೈನ ಭುಲೇಶ್ವರದ ಅಪಾರ್ಟ್ಮೆಂಟ್ ಒಂದರಲ್ಲಿ ಎರಡು ಬೆಡ್ ರೂಮ್ ಗಳ ಬಾಡಿಗೆ ಮನೆಯಲ್ಲಿದ್ದು, ಈ ಮನೆಯಲ್ಲಿಯೇ ಮುಕೇಶ್ ಹಾಗೂ ಅನಿಲ್ ತಮ್ಮ ಬಾಲ್ಯವನ್ನು ಕಳೆದಿದ್ದಾರೆ. ಉದ್ಯಮದಲ್ಲಿ ಉನ್ನತ ಸ್ಥಾನಕ್ಕೇರಿದ ಬಳಿಕ ಧೀರೂಬಾಯ್ ಅಂಬಾನಿ, ಕೊಲಾಬದಲ್ಲಿ ‘ಸಿ ವಿಂಡ್’ ಹೆಸರಿನ 14 ಅಂತಸ್ತಿನ ಅಪಾರ್ಟ್ಮೆಂಟ್ ಖರೀದಿಸಿದ್ದು, ಇದೇ ಅಪಾರ್ಟ್ಮೆಂಟ್ ನ ಬೇರೆ ಬೇರೆ ಫ್ಲೋರ್ ಗಳಲ್ಲಿ ಮುಕೇಶ್ ಅಂಬಾನಿ ಹಾಗೂ ಅನಿಲ್ ಅಂಬಾನಿ ತಮ್ಮ ಕುಟುಂಬದೊಂದಿಗೆ ವಾಸವಾಗಿದ್ದರು. ಇದೀಗ ಇಬ್ಬರೂ ವೈಭವೋಪೇತ ನಿವಾಸಗಳಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...