alex Certify
ಕನ್ನಡ ದುನಿಯಾ       Mobile App
       

Kannada Duniya

ಹಿಂದು ಯುವತಿಯ ಮದುವೆಗೆ ಮುಸ್ಲಿಂ ಕುಟುಂಬಗಳ ನೆರವು

ಪಶ್ಚಿಮ ಬಂಗಾಳದಲ್ಲಿ ಹಿಂದು ಯುವತಿಯ ಮದುವೆಗೆ ಮುಸಲ್ಮಾನರು ದೇಣಿಗೆ ಸಂಗ್ರಹಿಸಿ ಕೊಟ್ಟಿದ್ದಾರೆ. ಆ ಗ್ರಾಮದಲ್ಲಿ ಕೇವಲ 8 ಹಿಂದು ಕುಟುಂಬಗಳಿವೆ, 600 ಮುಸ್ಲಿಂ ಕುಟುಂಬಗಳಿವೆ. ಸರಸ್ವತಿ ಎಂಬಾಕೆಗೆ ತಂದೆಯಿಲ್ಲ, ನಾಲ್ವರು ಸಹೋದರಿಯರ ದೊಡ್ಡ ಕುಟುಂಬ, ಮನೆಯಲ್ಲಿ ಕಡು ಬಡತನ.

ಮದುವೆಗೂ ಅವರ ಬಳಿ ಬಿಡಿಗಾಸು ಇರಲಿಲ್ಲ. ಹಾಗಾಗಿ ಮದರಸಾದ ಮುಖ್ಯಶಿಕ್ಷಕ ರಹಮಾನ್ ನೇತೃತ್ವದಲ್ಲಿ ಮುಸ್ಲಿಂರೆಲ್ಲ ಒಟ್ಟಾಗಿ ಸರಸ್ವತಿಗೆ ಸಹಾಯ ಮಾಡಿದ್ದಾರೆ. ವರನ ಕಡೆಯವರು 2000 ರೂಪಾಯಿ ವರದಕ್ಷಿಣೆ ಕೊಡುವಂತೆ ಬೇಡಿಕೆ ಇಟ್ಟಿದ್ದರು.

ಸರಸ್ವತಿಯ ತಾಯಿ ಅಕ್ಕಪಕ್ಕದವರೊಂದಿಗೆ ತಮ್ಮ ಕಷ್ಟ ತೋಡಿಕೊಂಡಿದ್ದಾರೆ. ಧರ್ಮ ಬೇರೆಯಾದರೇನು, ಸರಸ್ವತಿ ತಮ್ಮ ಮಗಳಿದ್ದಂತೆ ಅಂತಾ ಹೇಳಿದ ನೆರೆಹೊರೆಯ ಮುಸಲ್ಮಾನರು, ಹಣ ಸಂಗ್ರಹಿಸಿ ಕೊಟ್ಟು ಮದುವೆಗೆ ಸಹಕರಿಸಿದ್ದಾರೆ. ಸರಸ್ವತಿ ಹಾಗೂ ತಪನ್ ಚೌಧರಿಯ ವಿವಾಹ ಮತ್ತು ಆರತಕ್ಷತೆ ಸಾಂಗವಾಗಿ ನೆರವೇರಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...