alex Certify
ಕನ್ನಡ ದುನಿಯಾ       Mobile App
       

Kannada Duniya

ಮಾನವೀಯತೆಗೆ ಇಲ್ಲಿದೆ ಉತ್ತಮ ಉದಾಹರಣೆ

Muslim woman to give kidney to sister ailing Hindu friendಜಾತಿ, ಧರ್ಮದ ಹೆಸರಿನಲ್ಲಿ ವಿಶ್ವದೆಲ್ಲೆಡೆ ಸಂಘರ್ಷ ನಡೆಯುತ್ತಿರುವ ಮಧ್ಯೆ ಎಲ್ಲಕ್ಕಿಂತ ಮಿಗಿಲಾದುದು ಮಾನವೀಯತೆಯೇ ಎಂಬುದನ್ನು ಎತ್ತಿ ತೋರಿಸಿದ್ದಾಳೆ ಈ ಮುಸ್ಲಿಂ ಮಹಿಳೆ.

ಉತ್ತರ ಪ್ರದೇಶದ ಫತೇಪುರ್ ಜಿಲ್ಲೆಯಲ್ಲಿ ವಾಸಿಸುತ್ತಿರುವ ಶಂಶಾದ್ ಬೇಗಂ ಎಂಬ ಮುಸ್ಲಿಂ ಮಹಿಳೆ, ತನ್ನ ಕಿರಿಯ ಸಹೋದರಿಯ ಸ್ನೇಹಿತೆ ಮಹಾರಾಷ್ಟ್ರದ ಪುಣೆ ವಾಸಿ 38 ವರ್ಷದ ಹಿಂದೂ ಮಹಿಳೆ ಆರ್ತಿ ಎರಡೂ ಕಿಡ್ನಿಗಳ ವೈಫಲ್ಯದಿಂದ ಬಳಲುತ್ತಿರುವುದನ್ನು ಅರಿತು ತನ್ನ ಒಂದು ಕಿಡ್ನಿಯನ್ನು ದಾನ ಮಾಡಲು ಮುಂದೆ ಬಂದಿದ್ದಾಳೆ.

ಶಂಶಾದ್ ಬೇಗಂ, ಪುಣೆಯಲ್ಲಿರುವ ತನ್ನ ಸಹೋದರಿಯ ಮನೆಗೆ ಭೇಟಿ ನೀಡಿದ ವೇಳೆ ಆರ್ತಿ, ಡಯಾಲಿಸಿಸ್ ಗೆ ಒಳಗಾಗುತ್ತಿರುವುದನ್ನು ಅರಿತಿದ್ದಾಳೆ. ಬಳಿಕ ಆಕೆಯ ಕಷ್ಟಕ್ಕೆ ಸ್ಪಂದಿಸಲು ನಿರ್ಧರಿಸಿದ ಶಂಶಾದ್ ಬೇಗಂ, ತನ್ನ ಒಂದು ಕಿಡ್ನಿಯನ್ನು ದಾನ ಮಾಡಲು ತೀರ್ಮಾನಿಸಿದ್ದಾಳೆ. ಇದಕ್ಕೆ ಕುಟುಂಬದವರೂ ಒಪ್ಪಿಗೆ ಸೂಚಿಸಿದ್ದು, ಈಗ ಕಿಡ್ನಿ ದಾನಕ್ಕೆ ಅಗತ್ಯವಿರುವ ಪರೀಕ್ಷೆಗಳೆಲ್ಲವೂ ನಡೆದಿರುವುದಲ್ಲದೇ ಸಂಬಂಧಪಟ್ಟವರ ಅನುಮತಿಗಾಗಿ ನಿರೀಕ್ಷಿಸಲಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...