alex Certify
ಕನ್ನಡ ದುನಿಯಾ       Mobile App
       

Kannada Duniya

ಕೊನೆಗೂ ಪತ್ನಿಯ ಉತ್ತರಕ್ರಿಯೆ ನೆರವೇರಿಸಿದ ಮುಸ್ಲಿಂ ಪತಿ

ನವದೆಹಲಿ: ಮುಸ್ಲಿಂ ವ್ಯಕ್ತಿಯೊಬ್ಬ ಧಾರ್ಮಿಕ ಅಡ್ಡಿಗಳ ನಡುವೆಯೇ ತನ್ನ ಮೃತ ಪತ್ನಿಗೆ ಆಕೆಯ ಮಾತೃ ಧರ್ಮದಲ್ಲೇ ಉತ್ತರ ಕ್ರಿಯೆಯನ್ನು ಮಾಡಿ ಮುಗಿಸಿದ್ದಾನೆ.

ಕಳೆದ ವಾರ ನಿವೇದಿತಾ ಘಾಟಕ್ ಎಂಬಾಕೆ ಬಹು ಅಂಗಾಗ ವೈಫಲ್ಯದಿಂದ ಮೃತಪಟ್ಟಿದ್ದಳು. ಬಳಿಕ ಆಕೆಯ ದೇಹವನ್ನು ಪತಿ ಇಮ್ತಿಯಾಜ್ ಉರ್ ಅಹ್ಮದ್ ದಹನ ಮಾಡಿದ್ದರೂ, ಬಳಿಕ ಹಿಂದೂ ಧರ್ಮದಂತೆ ಉತ್ತರ ಕ್ರಿಯೆ ಮಾಡಲು ಅಲ್ಲಿನ ಸ್ಥಳೀಯ ಧಾರ್ಮಿಕ ಸಂಸ್ಥೆ ಅವಕಾಶ ನೀಡಿರಲಿಲ್ಲ.

ಧಾರ್ಮಿಕ ಕ್ರಿಯೆಗೆ ಸಂಸ್ಥೆಯ ಕೊಠಡಿಗಳನ್ನು ಕಾಯ್ದಿರಿಸಲಾಗಿತ್ತಾದರೂ, ಧರ್ಮದ ನೆಪವೊಡ್ಡಿ ಅವಕಾಶ ನಿರಾಕರಿಸಲಾಗಿತ್ತು.

ಮುಸ್ಲಿಂ ಧರ್ಮದಲ್ಲಿ ಗೋತ್ರ, ಇತ್ಯಾದಿ ಇಲ್ಲ. ಹಾಗೆಯೇ ಮೃತ ಮಹಿಳೆ ಹಿಂದೂ ಆಗಿದ್ದರೂ, ಆಕೆ ಮದುವೆಯಾಗಿದ್ದು ಮುಸ್ಲಿಂ ಸಮುದಾಯದ ವ್ಯಕ್ತಿಯನ್ನು. ಈ ಕಾರಣಕ್ಕೆ ಆಕೆ ಹಿಂದು ಆಗಿ ಉಳಿದಿಲ್ಲ. ಹೀಗಾಗಿ ಉತ್ತರ ಕ್ರಿಯೆಗೆ ಅವಕಾಶ ನೀಡುವುದಿಲ್ಲ ಎಂದು ಧಾರ್ಮಿಕ ಸಂಸ್ಥೆ ಅವಕಾಶ ನಿರಾಕರಿಸಿತ್ತು. ಈ ನಡುವೆ ತನ್ನ ಪತ್ನಿಯ ಮಾತೃಧರ್ಮದಲ್ಲೇ ಉತ್ತರ ಕ್ರಿಯೆ ಮಾಡಬೇಕೆಂಬ ಹಠ ತೊಟ್ಟ ಇಮ್ತಿಯಾಜ್ ಉರ್ ಅಹ್ಮದ್ ಗೆ ಇನ್ನೊಂದು ಧಾರ್ಮಿಕ ಸಂಸ್ಥೆ ನೆರವಿಗೆ ಬಂದಿದ್ದು, ಉತ್ತರ ಕ್ರಿಯೆ ಮಾಡಲು ಸಹಕಾರ ನೀಡಿದೆ. ಆತ ತನ್ನ ಪುತ್ರಿ ಮುಖೇನ ಉತ್ತರ ಕ್ರಿಯೆ ಮಾಡಿಸಿದ್ದಾನೆ ಎಂದು ತಿಳಿದುಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...