alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೀತಿಗಾಗಿ ಮತಾಂತರವಾದರೂ ದಕ್ಕಲಿಲ್ಲ ಪತ್ನಿ…!

ಪತ್ನಿಯ ಜತೆ ಬಾಳ್ವೆ ಮಾಡಲು ವ್ಯಕ್ತೀಯೋರ್ವ ಮತಾಂತರಗೊಂಡರೂ ಸಾಧ್ಯವಾಗಿಲ್ಲ.
ಸುಪ್ರೀಂ ಕೋರ್ಟ್‌ನಲ್ಲಿ ಯುವತಿ ನೀಡಿದ ಹೇಳಿಕೆಯಿಂದ ಆಕೆ ಪೋಷಕರೊಂದಿಗಿರುವುದೇ ಸೂಕ್ತ ಎಂದು ಸರ್ವೋಚ್ಛ ನ್ಯಾಯಾಲಯ ತೀರ್ಪು ನೀಡಿದೆ.

ಅಂಜಲಿ ಜೈನ್‌ ಹಾಗೂ ಸಿದ್ದೀಕ್‌ ಕಳೆದ ಫೆಬ್ರವರಿಯಲ್ಲಿ ಪ್ರೇಮ ವಿವಾಹವಾಗಿದ್ದರು. ಅಂಜಲಿಯನ್ನು ಮದುವೆಯಾಗಲೆಂದೇ ಸಿದ್ದೀಕ್‌ ಹಿಂದು ಧರ್ಮಕ್ಕೆ ಮತಾಂತರಗೊಂಡಿದ್ದ. ಆ ಬಳಿಕ ಆರ್ಯನ್‌ ಎಂದು ಹೆಸರು ಬದಲಾಯಿಸಿಕೊಂಡಿದ್ದ.

ಮದುವೆಯಾದ ಬಳಿಕ ತನ್ನ ಮನೆಗೆ ತೆರಳಿದ ಅಂಜಲಿ, ಈ ವಿಚಾರವನ್ನು ಪೋಷಕರಿಂದ ಮುಚ್ಚಿಟ್ಟಿದ್ದಳು. ಆದರೆ ಅಂಜಲಿ ಮದುವೆ ಸಂಗತಿಯನ್ನು ಪೋಷಕರು ತಿಳಿದುಕೊಂಡಿದ್ದಾರೆ. ಜೂ.30 ರಂದು ಆರ್ಯನ್‌ ನೋಡಲು ಅಂಜಲಿ ಹೋಗುವ ವೇಳೆ, ದಾರಿಯಲ್ಲಿ ಪೊಲೀಸರು ತಡೆದು, ಪೋಷಕರಿಗೆ ಒಪ್ಪಿಸಿದ್ದಾರೆ. ಬಳಿಕ ಪೊಲೀಸರ ಬಳಿ ತಾನು ಸಿದ್ದೀಕ್‌ ಜತೆಗೆ ಇರಲು ಬಯಸುವುದಿಲ್ಲ ಎಂದು ಹೇಳಿಕೆ ನೀಡಿದ್ದು, ಈ ಸಂಬಂಧ ದೂರು ದಾಖಲಾಗಿದೆ.

ಛತ್ತೀಸಗಡ ಹೈಕೋರ್ಟ್‌ನಲ್ಲಿ ಈ ಪ್ರಕರಣ ವಿಚಾರಣೆ ನಡೆಸಿ, ಅಂಜಲಿ 23 ವರ್ಷದವಳಾಗಿದ್ದು, ಪೋಷಕರ ಜತೆ ಅಥವಾ ಹಾಸ್ಟೆಲ್‌ನಲ್ಲೂ ಇರಬಹುದು. ಈ ನಿರ್ಧಾರ ಅವಳಿಗೆ ಬಿಟ್ಟಿದ್ದು ಎಂದು ತೀರ್ಪು ನೀಡಲಾಗಿತ್ತು.

ಹೈಕೋರ್ಟ್‌ ತೀರ್ಪನ್ನು ಪ್ರಶ್ನಿಸಿ, ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಈ ವೇಳೆ ತಾನು ಪೋಷಕರೊಂದಿಗೇ ಇರುವುದಾಗಿ ಅಂಜಲಿ ಹೇಳಿಕೆ ನೀಡಿದ್ದಾಳೆ. ಅದರಂತೆ ಸುಪ್ರೀಂ ಕೋರ್ಟ್ ವಿಭಾಗೀಯ ಪೀಠ, ಅಂಜಲಿ ಪೋಷಕರೊಂದಿಗೆ ಇರುವುದೇ ಸೂಕ್ತ ಎಂದು ತೀರ್ಪು ನೀಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...