alex Certify
ಕನ್ನಡ ದುನಿಯಾ       Mobile App
       

Kannada Duniya

ಹುಡುಗಿ ಭೇಟಿಗೆ ಬಂದು ಒದೆ ತಿಂದ ಯುವಕನ ವಿಡಿಯೋ ವೈರಲ್

ಉತ್ತರ ಪ್ರದೇಶದ ಕಾನ್ಪುರದಲ್ಲಿ ಮುಸ್ಲಿಂ ಯುವಕನೊಬ್ಬ ಹಿಂದೂ ಯುವತಿ ಭೇಟಿಗೆ ಬಂದಿದ್ದ. ಇದನ್ನು ತಿಳಿದ ಕೆಲವರು ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇದ್ರ ವಿಡಿಯೋ ಈಗ ವೈರಲ್ ಆಗಿದೆ.

ಮುಸ್ಲಿಂ ಯುವಕ ಹಾಗೂ ಹಿಂದೂ ಯುವತಿ ಕಳೆದ ಮೂರು ವರ್ಷಗಳಿಂದ ಸ್ನೇಹಿತರಂತೆ. ರೈಲ್ವೆ ನಿಲ್ದಾಣದಲ್ಲಿ ಹುಡುಗಿ ಭೇಟಿಗೆ ಯುವಕ ಮುಂದಾಗಿದ್ದಾನೆ. ಇದು ಸಂಘಟನೆಯೊಂದರ ಸದಸ್ಯರಿಗೆ ತಿಳಿದಿದೆ. ಯುವಕನನ್ನು ಹಿಂಬಾಲಿಸಿದ ಸಂಘಟನೆ ಸದಸ್ಯರು ಯುವಕನಿಗೆ ಪ್ರಶ್ನೆ ಕೇಳಿದ್ದಾರೆ. ಯುವಕ, ಹುಡುಗಿ ಕೇವಲ ಸ್ನೇಹಿತೆ ಎಂದು ಉತ್ತರ ನೀಡಿದ್ದಾನೆ. ಇದ್ರಿಂದ ಮತ್ತಷ್ಟು ಕೋಪಗೊಂಡ ಸಂಘಟನೆ ಸದಸ್ಯರು ಒದೆ ನೀಡಿದ್ದಾರಂತೆ.

ಕೆಲ ದಿನಗಳ ಹಿಂದೆ ಉತ್ತರಖಂಡದಲ್ಲಿ ಕೂಡ ಇಂಥಹದ್ದೇ ಘಟನೆ ನಡೆದಿತ್ತು. ದೇವಸ್ಥಾನದ ಆವರಣದಲ್ಲಿ ಮುಸ್ಲಿಂ ಯುವಕ ಹಿಂದೂ ಯುವತಿ ಭೇಟಿಯಾಗಿದ್ದ ಎನ್ನುವ ಕಾರಣಕ್ಕೆ ಆತನ ಮೇಲೆ ಹಲ್ಲೆ ನಡೆದಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...