alex Certify
ಕನ್ನಡ ದುನಿಯಾ       Mobile App
       

Kannada Duniya

ಹಿಂದೂ ಪತ್ನಿ ಶ್ರಾದ್ಧ ಮಾಡಲು ಹೋರಾಡ್ತಿದ್ದಾನೆ ಮುಸ್ಲಿಂ ಪತಿ

ಮುಸ್ಲಿಂ ಪತಿಯೊಬ್ಬ ತನ್ನ ಹಿಂದೂ ಪತ್ನಿ ಕೊನೆ ಆಸೆ ಈಡೇರಿಸಲು ಹೋರಾಟ ನಡೆಸುತ್ತಿದ್ದಾನೆ. ಹಿಂದಿನ ವಾರ ನಿವೇದಿತಾ ರಹಮಾನ್ ಸಾವನ್ನಪ್ಪಿದ್ದಾಳೆ. ಆಕೆ ಅಂತ್ಯ ಸಂಸ್ಕಾರವನ್ನು ಕುಟುಂಬ ಬೋಧ್ ಘಾಟ್ ನಲ್ಲಿ ನೆರವೇರಿಸಿದೆ. ಆದ್ರೆ ನಿವೇದಿತಾ ಕುಟುಂಬಕ್ಕೆ ಆಕೆ ಶ್ರಾದ್ಧ ಮಾಡಲು ಸಾಧ್ಯವಾಗಲಿಲ್ಲ. ದೇವಸ್ಥಾನದ ಆಡಳಿತ ಮಂಡಳಿ ಶ್ರಾದ್ಧ ಮಾಡಲು ಕುಟುಂಬಕ್ಕೆ ಅವಕಾಶ ನೀಡಲಿಲ್ಲ.

ಚಿತರಂಜನ್ ಪಾರ್ಕ್ ನ ಕಾಳಿ ಮಂದಿರದಲ್ಲಿ ಶ್ರಾದ್ಧ ಮಾಡಲು ಕುಟುಂಬ ಮುಂದಾಗಿತ್ತು. ಇದಕ್ಕಾಗಿ 1300 ರೂಪಾಯಿ ಮುಂಗಡ ಹಣ ನೀಡಿತ್ತು. ಆಗಸ್ಟ್ 12ರಂದು ಶ್ರಾದ್ಧ ನಡೆಯಬೇಕಿತ್ತು. ಆದ್ರೆ ಬುಕ್ಕಿಂಗ್ ಆದ ಕೆಲವೇ ನಿಮಿಷಗಳಲ್ಲಿ ಕರೆ ಮಾಡಿದ ಆಡಳಿತ ಮಂಡಳಿ ಶ್ರಾದ್ಧ ಮಾಡಲು ಸಾಧ್ಯವಿಲ್ಲ ಎಂದಿದೆ. ಇದಕ್ಕೆ ಕಾರಣವೇನು ಎಂದ್ರೆ ನಿಮಗೆ ಗೊತ್ತು ಎಂದು ಫೋನ್ ಇಟ್ಟಿದೆ. ಹಣ ವಾಪಸ್ ಪಡೆಯುವಂತೆಯೂ ಹೇಳಿದೆ.

ಈಗ ರೆಹಮಾನ್ ಕುಟುಂಬಕ್ಕೆ ಸಹಾಯ ಸಂಸ್ಥೆಯೊಂದರ ನೆರವು ಸಿಕ್ಕಿದೆ. ಅದ್ರ ಮೂಲಕ ಶ್ರಾದ್ಧ ಮಾಡಲು ನಿವೇದಿತಾ ಕುಟುಂಬ ಚಿಂತನೆ ನಡೆಸುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...