alex Certify
ಕನ್ನಡ ದುನಿಯಾ       Mobile App
       

Kannada Duniya

ಗೋ ರಕ್ಷಣೆಗಾಗಿ ಮುಸ್ಲಿಂ ವ್ಯಕ್ತಿಯಿಂದ 12 ಸಾವಿರ ಕಿ.ಮೀ. ಪಾದಯಾತ್ರೆ

ದೇಶದಲ್ಲಿ ಗೋ ಮಾಂಸ ಕುರಿತಂತೆ ಪರ-ವಿರೋಧದ ಚರ್ಚೆಗಳು ನಡೆಯುತ್ತಿರುವ ಮಧ್ಯೆ ರಾಯ್ಪುರದ ಮುಸ್ಲಿಂ ವ್ಯಕ್ತಿಯೊಬ್ಬರು ಗೋ ರಕ್ಷಣೆಯ ಮಹತ್ವ ಸಾರಲು ಲೇಹ್ ನಿಂದ ಕನ್ಯಾಕುಮಾರಿವರೆಗೆ ಗೋ ಸೇವಾ ಸದ್ಬಾವನಾ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ.

ಮಹಮ್ಮದ್ ಫಯಾಜ್ ಖಾನ್, ಸಿಂಧೂ ದರ್ಶನ್ ಉತ್ಸವದಂದು ಲೇಹ್ ನಿಂದ ಜೂನ್ 24 ರಂದು ಪಾದಯಾತ್ರೆ ಆರಂಭಿಸಿದ್ದು, ಈಗಾಗಲೇ 2100 ಕಿ.ಮೀ. ಕ್ರಮಿಸಿದ್ದಾರೆ. ಪ್ರತಿ ದಿನ 20 ರಿಂದ 25 ಕಿ.ಮೀ. ಕ್ರಮಿಸುವ ಮಹಮ್ಮದ್ ಫಯಾಜ್ ಖಾನ್ ವಾರಣಾಸಿ ತಲುಪಿದ್ದು, ಬುಧವಾರದಂದು ಮೊಘಲ್ ಸರಾಯ್ ನತ್ತ ಪ್ರಯಾಣ ಬೆಳೆಸಿದ್ದಾರೆ.

2019 ಜನವರಿ ವೇಳೆ ಅಮೃತಸರದಲ್ಲಿ ಮಹಮ್ಮದ್ ಫಯಾಜ್ ಖಾನ್ ಅವರ ಪಾದಯಾತ್ರೆ ಅಂತ್ಯಗೊಳ್ಳುವ ನಿರೀಕ್ಷೆಯಿದೆ. ಎಂಎ ಪದವೀಧರರಾಗಿರುವ ಮಹಮ್ಮದ್ ಫಯಾಜ್, ಪಾದಯಾತ್ರೆ ಸಂದರ್ಭದಲ್ಲಿ ಸಾರ್ವಜನಿಕರಿಗೆ ಗೋ ರಕ್ಷಣೆಯ ಮಹತ್ವ ವಿವರಿಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...