alex Certify
ಕನ್ನಡ ದುನಿಯಾ       Mobile App
       

Kannada Duniya

ಹಿಂದು ಸಂಪ್ರದಾಯದಂತೆ ದತ್ತು ಪುತ್ರನ ಮದುವೆ ಮಾಡಿದೆ ಮುಸ್ಲಿಂ ಕುಟುಂಬ

ಡೆಹ್ರಾಡೂನ್ ನ ಮುಸ್ಲಿಂ ಕುಟುಂಬವೊಂದು ದೇಶಕ್ಕೆ ಮಾದರಿಯಾಗುವಂತಹ ಕಾರ್ಯ ಮಾಡಿದೆ. ಅನಾಥ ಹಿಂದು ಬಾಲಕನನ್ನು ದತ್ತು ಪಡೆದಿದ್ದ ಈ ಕುಟುಂಬ, ಆತನ ವಿವಾಹವನ್ನು ಹಿಂದು ಸಂಪ್ರದಾಯದಂತೆ ನೆರವೇರಿಸಿದೆ.

ಮೊಯಿನುದ್ದೀನ್ ಎಂಬಾತನ ಕುಟುಂಬ 12 ವರ್ಷದವನಿದ್ದಾಗ ರಾಕೇಶ್ ರಸ್ತೋಗಿಯನ್ನು ದತ್ತು ಪಡೆದಿತ್ತು. ಇದೀಗ ರಾಕೇಶ್ ವಿವಾಹ ನೆರವೇರಿದೆ. ಮೊಯಿನುದ್ದೀನ್ ಮತ್ತವರ ಪತ್ನಿ ಕೌಸರ್, ತಮ್ಮ ದತ್ತು ಮಗನ ಮದುವೆ ಮಾಡಿದ್ದಾರೆ.

ವಿಶೇಷ ಅಂದ್ರೆ ಅಪ್ಪಟ ಹಿಂದೂ ಸಂಪ್ರದಾಯದಂತೆ ವಿವಾಹ ನಡೆದಿದ್ದು, ಸೊಸೆ ಸೋನಿಯನ್ನು ಮನೆ ತುಂಬಿಸಿಕೊಂಡಿದ್ದಾರೆ. ಪ್ರತಿ ವರ್ಷ ದೀಪಾವಳಿ, ಹೋಳಿ ಹಬ್ಬವನ್ನು ಕೂಡ ರಾಕೇಶ್ ಆಚರಿಸ್ತಾನಂತೆ, ಅದಕ್ಕೆ ಕುಟುಂಬದವರ ಸಹಕಾರವೂ ಇದೆ.

ತಾನು ಮುಸ್ಲಿಂ ಕುಟುಂಬದಲ್ಲಿದ್ದೇನೆ ಎಂಬ ಭಾವನೆಯೇ ಮೂಡದಂತೆ ತನ್ನನ್ನು ಬೆಳೆಸಿದ್ದಾರೆ ಅನ್ನೋದು ರಾಕೇಶ್ ಮನದಾಳದ ಮಾತು. ಯಾಕಂದ್ರೆ ರಾಕೇಶ್ ನ ಪೂಜೆ ಪುನಸ್ಕಾರಗಳಿಗೆ ಕೂಡ ತಂದೆ-ತಾಯಿ ಅಡ್ಡಿ ಮಾಡಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...