alex Certify
ಕನ್ನಡ ದುನಿಯಾ       Mobile App
       

Kannada Duniya

ಗಡ್ಡಕ್ಕಾಗಿ ಕೆಲಸವನ್ನೇ ಬಿಟ್ಟ ಪೊಲೀಸ್…!

policecap1_2

ಮಹಾರಾಷ್ಟ್ರ ರಾಜ್ಯ ಮೀಸಲು ಪೊಲೀಸ್ ಪಡೆಯ ನಿಯಮದ ಪ್ರಕಾರ ಖಾಕಿಗಳು ಗಡ್ಡ ಬಿಡುವಂತಿಲ್ಲ. ನಿಯಮ ಪಾಲಿಸದೆ ಗಡ್ಡ ಬಿಟ್ಟಿದ್ದ ಮುಸ್ಲಿಂ ಪೊಲೀಸ್ ಪೇದೆಯನ್ನು 5 ವರ್ಷದ ಹಿಂದೆ ಅಮಾನತು ಮಾಡಲಾಗಿತ್ತು. ಈ ಪ್ರಕರಣದ ವಿಚಾರಣೆ ಸದ್ಯ ಸುಪ್ರೀಂ ಕೋರ್ಟ್ ನಲ್ಲಿ ನಡೆಯುತ್ತಿದೆ.

ಕೆಲಸವನ್ನು ಮರಳಿ ಪಡೆಯಲು ಸುಪ್ರೀಂ ಕೋರ್ಟ್ ಪೇದೆಯ ಎದುರು ಆಫರ್ ಒಂದನ್ನು ಇಟ್ಟಿತ್ತು. ಮುಸ್ಲಿಂ ಹಬ್ಬಗಳ ಸಂದರ್ಭದಲ್ಲಿ ಗಡ್ಡ ಬಿಟ್ಟು, ಉಳಿದ ಸಮಯದಲ್ಲಿ ಗಡ್ಡ ಬೋಳಿಸುವುದಾದಲ್ಲಿ ಮತ್ತೆ ಕರ್ತವ್ಯಕ್ಕೆ ಹಾಜರಾಗಬಹುದು ಅಂತಾ ಹೇಳಿತ್ತು. ಆದ್ರೆ ಪೇದೆ ಜಹೀರುದ್ದೀನ್ ಶಮ್ಸೊದ್ದೀನ್ ಇದನ್ನು ತಿರಸ್ಕರಿಸಿದ್ದಾನೆ.

ನಾಲ್ಕು ವರ್ಷಗಳಿಂದ ಪ್ರಕರಣ ಬಾಕಿ ಇದ್ದಿದ್ರಿಂದ ಶೀಘ್ರ ವಿಚಾರಣೆ ನಡೆಸುವಂತೆ ಪೇದೆ ಮನವಿ ಸಲ್ಲಿಸಿದ್ದ. ನಿಜಕ್ಕೂ ನಿಮ್ಮ ಸ್ಥಿತಿ ಬಗ್ಗೆ ಬೇಸರವೆನಿಸುತ್ತದೆ, ಕರ್ತವ್ಯದಿಂದ ದೂರ ಉಳಿಯುವುದು ಸರಿಯಲ್ಲ ಅಂತಾ ಅಭಿಪ್ರಾಯಪಟ್ಟಿದ್ದ ಸುಪ್ರೀಂ ಮುಖ್ಯನ್ಯಾಯಮೂರ್ತಿಗಳ ನೇತೃತ್ವದ ಪೀಠ, ಈ ಆಫರ್ ನೀಡಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...