alex Certify
ಕನ್ನಡ ದುನಿಯಾ       Mobile App
       

Kannada Duniya

16 ವರ್ಷದ ಗಾಯಕಿ ವಿರುದ್ಧ 46 ಮೌಲ್ವಿಗಳಿಂದ ಫತ್ವಾ

singer_eymq7e5-1

ಅಸ್ಸಾಂನಲ್ಲಿ 46 ಇಸ್ಲಾಂ ಮೌಲ್ವಿಗಳು 16 ವರ್ಷದ ಗಾಯಕಿ ನಾಹಿದ್ ಅಫ್ರೀನ್ ಗೆ ಫತ್ವಾ ಹೊರಡಿಸಿದ್ದಾರೆ. ಅಫ್ರೀನ್ 2015 ರಲ್ಲಿ ಟಿವಿ ರಿಯಾಲಿಟಿ ಶೋ ಇಂಡಿಯನ್ ಐಡಲ್ ಜ್ಯೂನಿಯರ್ ನಲ್ಲಿ ಪಾಲ್ಗೊಂಡಿದ್ದಳು. ಅಲ್ಲಿ ಎರಡನೇ ರನ್ನರ್ ಅಪ್ ಆಗಿದ್ದ ಅಫ್ರೀನ್ ಗೆ ಈಗ ಫತ್ವಾ ಬಿಸಿ ತಟ್ಟಿದೆ.

ಅಫ್ರೀನ್ ಸಾರ್ವಜನಿಕ ಪ್ರದೇಶದಲ್ಲಿ ಹಾಡಬಾರದೆಂದು ಫತ್ವಾ ಹೊರಡಿಸಲಾಗಿದೆ. ಅಸ್ಸಾಂ ಕಾಲೇಜೊಂದರಲ್ಲಿ ಮಾರ್ಚ್ 25 ರಂದು ಅಫ್ರೀನ್ ಕಾರ್ಯಕ್ರಮವಿದೆ. ಇದು ಷರಿಯತ್ ಗೆ ವಿರುದ್ಧ ಎಂದು ಫತ್ವಾದಲ್ಲಿ ಹೇಳಲಾಗಿದೆ. ಮ್ಯೂಜಿಕಲ್ ನೈಟ್ಸ್ ನಂತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಷರಿಯತ್ ಗೆ ವಿರುದ್ಧ ಎನ್ನಲಾಗಿದೆ. ಮಸೀದಿ, ಈದ್ಗಾ, ಮದರಸಾ ಆಸುಪಾಸು ಇಂತಹ ಕಾರ್ಯಕ್ರಮ ನಡೆದ್ರೆ ಅಲ್ಲಾನ ಅಸಮಾಧಾನಕ್ಕೆ ಕಾರಣವಾಗುತ್ತದೆ. ಇದು ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಫತ್ವಾದಲ್ಲಿ ತಿಳಿಸಲಾಗಿದೆ.

ಪೊಲೀಸ್ ಅಧಿಕಾರಿಗಳ ಪ್ರಕಾರ ಭಯೋತ್ಪಾದನಾ ಸಂಘಟನೆ ವಿರುದ್ಧ ಅಫ್ರೀನ್ ಕೆಲ ಹಾಡುಗಳನ್ನು ಹಾಡಿದ್ದಳು. ಹಾಗಾಗಿ ಈ ಫತ್ವಾಕ್ಕೂ ಭಯೋತ್ಪಾದನಾ ಸಂಘಟನೆಗೂ ನಂಟಿರುವ ಸಾಧ್ಯತೆ ಇದ್ದು, ಈ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...