alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ರಕರ್ತನ ತಾಯಿ, ಮಗಳ ಬರ್ಬರ ಹತ್ಯೆ

ನಾಗ್ಪುರದಲ್ಲಿ ಪತ್ರಕರ್ತನೊಬ್ಬನ ತಾಯಿ ಹಾಗೂ 1 ವರ್ಷದ ಮಗಳನ್ನು ಹತ್ಯೆ ಮಾಡಲಾಗಿದೆ. ನುಲ್ಲಾ ಎಂಬಲ್ಲಿ ಅವರ ಮೃತದೇಹ ಪತ್ತೆಯಾಗಿದೆ. 52 ವರ್ಷದ ಉಷಾ ಕಾಂಬ್ಳೆ ಹಾಗೂ 1 ವರ್ಷದ ರಾಶಿ ಕೊಲೆಯಾದವರು. ಸ್ಥಳೀಯ ಪತ್ರಿಕೆಯೊಂದರಲ್ಲಿ ವರದಿಗಾರನಾಗಿದ್ದ ರವಿಕಾಂತ್ ತಾಯಿ ಉಷಾ ಹಾಗೂ ಮಗಳು ರಾಶಿ ಶನಿವಾರ ಸಂಜೆಯಿಂದ ನಾಪತ್ತೆಯಾಗಿದ್ದರು.

ನಿನ್ನೆ ಬೆಳಿಗ್ಗೆ 10.30ರ ವೇಳೆಗೆ ಇಬ್ಬರ ಮೃತದೇಹವೂ ದೊರೆತಿದೆ. ಉಷಾ ಕಾಂಬ್ಳೆ ಫೈನಾನ್ಸ್ ಬ್ಯುಸಿನೆಸ್ ಮಾಡುತ್ತಿದ್ರು. ಸಂಜೆ 5.30 ರ ವೇಳೆಗೆ ಮೊಮ್ಮಗಳ ಜೊತೆಗೆ ಉಷಾ ಜ್ಯುವೆಲರಿ ಶಾಪ್ ಗೆ ತೆರಳಿದ್ದರು. ಎಷ್ಟು ಹೊತ್ತಾದ್ರು ವಾಪಸ್ ಮನೆಗೆ ಬಂದಿರಲಿಲ್ಲ.

ಆಕೆಯ ಪತಿ ಕರೆ ಮಾಡಲು ಯತ್ನಿಸಿದಾಗ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ನಂತರ ರವಿಕಾಂತ್ ಪೊಲೀಸರಿಗೆ ದೂರು ನೀಡಿದ್ದರು. ಹತ್ಯೆಗೆ ಸಂಬಂಧಿಸಿದಂತೆ ಗಣೇಶ್ ಸಾಹು ಎಂಬ 26 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಚಿಟ್ ಫಂಡ್ ಹಣಕ್ಕೆ ಸಂಬಂಧಿಸಿದಂತೆ ಉಷಾ ಜೊತೆಗೆ ಆತ ಜಗಳವಾಡಿದ್ದ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...