alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಎದೆ ನಡುಗಿಸುವ ದೃಶ್ಯ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸಿಸಿ ಟಿವಿ ದೃಶ್ಯವೊಂದು ಎದೆ ನಡುಗಿಸುವಂತಿದೆ. ತನ್ನ ಮನೆ ಮುಂದೆ ಕುಳಿತಿದ್ದ ಮಹಿಳೆಯೊಬ್ಬಳನ್ನು ಮೂರು ಮಂದಿ ದುಷ್ಕರ್ಮಿಗಳು ತಂಡ ಹಾಡಹಗಲೇ ಗುಂಡು ಹಾರಿಸಿ ಬರ್ಬರವಾಗಿ ಹತ್ಯೆ ಮಾಡಿದೆ.

ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಗ್ರಾಮವೊಂದರಲ್ಲಿ ಬುಧವಾರದಂದು ಈ ಘಟನೆ ನಡೆದಿದ್ದು, ಮಹಿಳೆಯ ಹತ್ಯೆಗೂ ಮುನ್ನ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಆಕೆಯ ಪುತ್ರನನ್ನೂ ಇದೇ ದುಷ್ಕರ್ಮಿಗಳ ತಂಡ ಹತ್ಯೆ ಮಾಡಿದ್ದು, ನಂತರ ತನ್ನ ಮನೆಯ ಬಳಿ ಮತ್ತೊಬ್ಬ ಮಹಿಳೆಯೊಂದಿಗೆ ಮಾತನಾಡುತ್ತ ಕುಳಿತಿದ್ದಾಕೆಯನ್ನು ಕೊಲೆಗೈದಿದೆ.

ಇಬ್ಬರು ಮಹಿಳೆಯರು ಮಾತನಾಡುತ್ತ ಕುಳಿತಿರುವಾಗಲೇ ಬೈಕ್ ನಲ್ಲಿ ಅಲ್ಲಿಗೆ ಬಂದ ಮೂವರು, ಏಕಾಏಕಿ ಗುಂಡು ಹಾರಿಸಿದ್ದಾರೆ. ಮೂವರು ತಮ್ಮ ರಿವಾಲ್ವರ್ ನಿಂದ ಎಡೆಬಿಡದೆ ಮಹಿಳೆ ಮೇಲೆ ಗುಂಡು ಹಾರಿಸಿದ್ದು, ಆಕೆ ಸತ್ತಿದ್ದಾಳೆಂದು ಖಚಿತಪಡಿಸಿಕೊಂಡ ನಂತರವೇ ಅಲ್ಲಿಂದ ತೆರಳಿದ್ದಾರೆ.

ಮೃತಪಟ್ಟವರನ್ನು ನಿಚತ್ತರ್ ಕೌರ್ ಹಾಗೂ ಆಕೆಯ ಪುತ್ರ ಬಲ್ವಿಂದರ್ ಎಂದು ಗುರುತಿಸಲಾಗಿದ್ದು, ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ಹತ್ಯೆ ನಡೆದಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...