alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ಷುಲ್ಲಕ ಕಾರಣಕ್ಕೆ ವೈದ್ಯರ ಹತ್ಯೆ ಮಾಡಿದ್ದ 9 ಮಂದಿ ಅರೆಸ್ಟ್

murder 26

ಕ್ಷುಲ್ಲಕ ಕಾರಣಕ್ಕೆ ವೈದ್ಯರೊಬ್ಬರನ್ನು ಮಾರಕಾಸ್ತ್ರಗಳಿಂದ ಥಳಿಸಿ ಕೊಲೆ ಮಾಡಿದ ಘಟನೆ ನವದೆಹಲಿಯ ವಿಕಾಸಪುರಿಯಲ್ಲಿ ನಡೆದಿದೆ. ಮನೆಯ ಬಳಿ ತಮ್ಮ ಮಗನೊಂದಿಗೆ ವೈದ್ಯ ಕ್ರಿಕೆಟ್ ಆಡುತ್ತಿದ್ದು, ಈ ಸಂದರ್ಭದಲ್ಲಿ ಚೆಂಡು ಬೈಕ್ ಸವಾರರಿಗೆ ತಗುಲಿದ್ದೇ ಘಟನೆಗೆ ಕಾರಣ ಎನ್ನಲಾಗಿದೆ.

ವಿಕಾಸಪುರಿ ನಿವಾಸಿಯಾಗಿರುವ ದಂತವೈದ್ಯ ಪಂಕಜ್ ನಾರಂಗ್ ತಮ್ಮ ಮನೆಯ ಎದುರಿನಲ್ಲಿ ತಮ್ಮ ಮಗ ಹಾಗೂ ಸಹೋದರಿಯ ಮಗನೊಂದಿಗೆ ರಾತ್ರಿ ಕ್ರಿಕೆಟ್ ಆಡುತ್ತಿದ್ದರು. ಈ ಸಂದರ್ಭದಲ್ಲಿ ಬೈಕ್ ನಲ್ಲಿ ಹೋಗುತ್ತಿದ್ದ ಸಮೀಪದ ಕೊಳಗೇರಿಯ ನಿವಾಸಿಗಳಿಗೆ ಚೆಂಡು ತಗುಲಿದೆ. ಇದೇ ಕಾರಣಕ್ಕೆ ಬೈಕ್ ಸವಾರರು ಹಾಗೂ ಪಂಕಜ್ ನಾರಂಗ್ ಅವರ ನಡುವೆ ಜಗಳವಾಗಿ ಮಾತಿಗೆ ಮಾತು ಬೆಳೆದಿದೆ. ಆಗ ಬೈಕ್ ಸವಾರರು ತಮ್ಮ ಏರಿಯಾಕ್ಕೆ ಹೋಗಿ ಯುವಕರನ್ನು ಕರೆತಂದಿದ್ದಾರೆ.

ವೈದ್ಯ ಪಂಕಜ್ ನಾರಂಗ್ ಅವರ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಥಳಿಸಿ ಹತ್ಯೆ ಮಾಡಿದ್ದಾರೆ. ಮನೆಯಲ್ಲಿದ್ದವರನ್ನೆಲ್ಲಾ ಥಳಿಸಿದ್ದಾರೆ. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ 9 ಮಂದಿಯನ್ನು ಬಂಧಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...