alex Certify
ಕನ್ನಡ ದುನಿಯಾ       Mobile App
       

Kannada Duniya

ವಿದ್ಯಾರ್ಥಿನಿಯರು ಹರಿದ ಜೀನ್ಸ್ ಧರಿಸುವುದಕ್ಕೆ ಬಿತ್ತು ಬ್ರೇಕ್

jeans

ಈಗ ಹರಿದ ಅಥವಾ ಸೀಳಿರುವ ಜೀನ್ಸ್ ಹಾಕೋದೇ ಫ್ಯಾಷನ್. ಅಲ್ಲಲ್ಲಿ ತೂತಾಗಿರುವ ಅಥವಾ ಸ್ವಲ್ಪ ಹರಿದಂತಿರುವ ಜೀನ್ಸ್ ಹಾಕಿದ್ರೆ ಅದು ಲೇಟೆಸ್ಟ್ ಟ್ರೆಂಡ್ ಅಂತಾರೆ ಯುವಕ- ಯುವತಿಯರು.

ಆದ್ರೆ ಮುಂಬೈನ ಪ್ರತಿಷ್ಠಿತ ಸೇಂಟ್ ಕ್ಸೇವಿಯರ್ ಕಾಲೇಜಿಗೆ ಇಂತಹ ಸ್ಟೈಲಿಶ್ ಜೀನ್ಸ್ ಹಾಕಿಕೊಂಡು ಬರುವಂತಿಲ್ಲ. ಇಂತಹ ಕತ್ತರಿಸಿದ ಜೀನ್ಸ್ ಧರಿಸಿದ್ರೆ ಬಡವರನ್ನು ಗೇಲಿ ಮಾಡಿದಂತಾಗುತ್ತದೆ ಅನ್ನೋ ಕಾರಣಕ್ಕೆ ಕಾಲೇಜು ಆಡಳಿತ ಮಂಡಳಿ ನಿಷೇಧ ಹೇರಿದೆ.

ಈಗಾಗ್ಲೇ ಸೇಂಟ್ ಕ್ಸೇವಿಯರ್ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಸ್ಲೀವ್ ಲೆಸ್ ಟಾಪ್ ಹಾಗೂ ಶಾರ್ಟ್ಸ್ ಹಾಕುವುದನ್ನು ನಿಷೇಧಿಸಲಾಗಿದೆ. ಈಗ ಕತ್ತರಿಸಿದ ಫ್ಯಾಷನೇಬಲ್ ಜೀನ್ಸ್ ಗೂ ಬ್ರೇಕ್ ಬಿದ್ದಿರೋದು ವಿದ್ಯಾರ್ಥಿಗಳಲ್ಲಿ ಅಸಮಾಧಾನ ಮೂಡಿಸಿದೆ.

ವಿದ್ಯಾರ್ಥಿನಿಯರು ಸ್ಟೈಲ್ ಹೆಸರಲ್ಲಿ ಅಂತಹ ಹರಿದ ಜೀನ್ಸ್ ಹಾಕಿಕೊಂಡು ಬಂದ್ರೆ ಬಡವರನ್ನು ಗೇಲಿ ಮಾಡಿದಂತೆ ಜೊತೆಗೆ ಅದರಿಂದ ಕಾಲೇಜಿಗೂ ಮುಜುಗರ ಉಂಟಾಗುತ್ತದೆ ಅಂತಾ ಆಡಳಿತ ಮಂಡಳಿ ಸಮರ್ಥಿಸಿಕೊಂಡಿದೆ. ಆದ್ರೆ ಮುಂಬೈ ಯೂನಿವರ್ಸಿಟಿಯಲ್ಲಿ ಇಂತಹ ಯಾವುದೇ ಡ್ರೆಸ್ ಕೋಡ್ ಗಳಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...