alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಮಹಿಳೆ ಮಾಡಿರುವ ಶಾಕಿಂಗ್ ಕೃತ್ಯ

ಉದ್ಯಮಿಯೊಬ್ಬನನ್ನು ಚಲಿಸುತ್ತಿರುವ ರೈಲಿನ ಎದುರು ನೂಕಿದ್ದ ಮಹಿಳೆಯನ್ನು ಮುಂಬೈನ ಕುರ್ಲಾ ರೈಲು ನಿಲ್ದಾಣದ ಪೊಲೀಸರು ಬಂಧಿಸಿದ್ದಾರೆ. ಓರ್ವ ಪುರುಷ ಹಾಗೂ ಮಹಿಳೆ ಜೊತೆಯಾಗಿ 56 ವರ್ಷದ ಉದ್ಯಮಿ ದೀಪಕ್ ಚಮನ್ ಲಾಲ್ ಪತ್ವಾ ಎಂಬಾತನನ್ನು ರೈಲು ಹಳಿಗಳ ಮೇಲೆ ನೂಕುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಹಳಿಗಳ ಮೇಲೆ ಬಿದ್ದು ತೀವ್ರ ಗಾಯಗೊಂಡಿದ್ದ ಉದ್ಯಮಿ ಮೃತಪಟ್ಟಿದ್ದಾನೆ. 38 ವರ್ಷದ ಮನೀಶಾ ಖಕಾಡಿಯಾ ಬಂಧಿತ ಮಹಿಳೆ. ದೀಪಕ್ ಚಮನ್ ತನ್ನನ್ನು ಅಶ್ಲೀಲವಾಗಿ ಸ್ಪರ್ಷಿಸಿದ್ದಾನೆ ಅಂತಾ ಮನೀಶಾ ಹೈಡ್ರಾಮಾ ಮಾಡಿದ್ಲು. ಈ ವೇಳೆ ವ್ಯಕ್ತಿಯೊಬ್ಬ ಆಕೆಯ ಬೆಂಬಲಕ್ಕೆ ಬಂದಿದ್ದ.

ದೀಪಕ್ ಆರೋಪವನ್ನು ಅಲ್ಲಗಳೆಯುತ್ತಿದ್ರೂ ಮನೀಶಾ ಹಾಗೂ ಆ ವ್ಯಕ್ತಿ ಸೇರಿಕೊಂಡು ಅವನನ್ನು ಹಳಿಗಳ ಮೇಲೆ ತಳ್ಳಿದ್ದಾರೆ. ಮೈಮೇಲೆ ರೈಲು ಹರಿದಿದ್ದರಿಂದ ದೀಪಕ್ ಮೃತಪಟ್ಟಿದ್ದಾನೆ. ಆರೋಪಿಗಳಿಬ್ಬರೂ ತಪ್ಪಿಸಿಕೊಂಡು ಪರಾರಿಯಾಗಿದ್ದು, ಈ ಪೈಕಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...