alex Certify
ಕನ್ನಡ ದುನಿಯಾ       Mobile App
       

Kannada Duniya

ಸರ ಕದ್ದ ಮಹಿಳೆ ಸೆರೆಯಾಗಿದ್ದೆಲ್ಲಿ ಅಂತ ಗೊತ್ತಾದ್ರೆ ಶಾಕ್ ಆಗ್ತೀರಾ…!

ಮುಂಬೈ ರೈಲು ನಿಲ್ದಾಣಗಳಲ್ಲಿ ದಿನೇ ದಿನೇ ಒಂದಲ್ಲಾ ಒಂದು ಕಳ್ಳತನದ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಕಳ್ಳರ ಕರಾಮತ್ತು ಸಿಸಿ ಟಿವಿಯಲ್ಲೋ ಅಥವಾ ಪ್ರಯಾಣಿಕರ ಮೊಬೈಲ್ ನಲ್ಲೋ ಸೆರೆಯಾಗುತ್ತಲೇ ಇರುತ್ತವೆ. ಇತ್ತೀಚೆಗೆ ಕೂಡ ಅಂತಹದ್ದೇ ಒಂದು ದೃಶ್ಯ ನೋಡೋದಕ್ಕೆ ಸಿಕ್ಕಿದೆ.

ವಿಕ್ರೋಹಿ ರೈಲ್ವೆ ನಿಲ್ದಾಣದಲ್ಲಿ ಮಹಿಳೆಯೊಬ್ಬಳು ಮತ್ತೊಬ್ಬ ಮಹಿಳೆಯ ಚಿನ್ನದ ಮಂಗಳ ಸೂತ್ರವನ್ನು ಕದ್ದು ಪರಾರಿಯಾಗುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮಹಿಳೆಯ ಸರ ಕದಿಯುವ ಆರೋಪಿ ಯಾವುದೇ ಸಾಹಸ ಕಲಾವಿದರಿಗೂ ಕಡಿಮೆ ಇಲ್ಲದಂತೆ ಟ್ರ್ಯಾಕ್ ಮೇಲೆ ಜಿಗಿದು ಮತ್ತೊಂದು ಕಡೆಗೆ ಓಡುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಸರ ಕದಿಯುವ ಮಹಿಳೆ ಟ್ರ್ಯಾಕ್ ಮೇಲೆ ಜಿಗಿಯುವ ಸಂದರ್ಭದಲ್ಲಿ ಮತ್ತೊಂದು ಕಡೆಯಿಂದ ಯಾವುದೇ ಲೋಕಲ್ ಟ್ರೈನ್ ಬಂದಿಲ್ಲ. ತನ್ನ ಮಗು ಕಳೆದು ಹೋಗಿದೆ ಎಂದು ಸರ ಕದ್ದ ಮಹಿಳೆ ಸ್ಟೇಷನ್ ನಲ್ಲಿ ಹೇಳಿಕೊಂಡು ತಿರುಗಾಡುತ್ತಿದ್ದಳು ಅನ್ನೋ ಮಾಹಿತಿಯನ್ನು ರೈಲ್ವೆ ಪೊಲೀಸರಿಗೆ ಹಲವರು ನೀಡಿದ್ದಾರೆ. ಆಕೆಯನ್ನು ಕೆಲವರು ಹಿಡಿಯೋಕೆ ಪ್ರಯತ್ನ ಪಟ್ಟರೂ ಮಗು ಕಳೆದುಹೋಗಿದೆ ಅನ್ನೊ ನೆಪವನ್ನು ಹೇಳಿಯೇ ಆಕೆ ತಪ್ಪಿಸಿಕೊಂಡಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...