alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಚಾರಿ ಪೇದೆ ಮೇಲೆ ಕೈಮಾಡಿದ ಮಹಿಳೆ

police

ನವಿ ಮುಂಬೈನಲ್ಲಿ ಮಹಿಳೆಯೊಬ್ಳು ಸಂಚಾರಿ ಪೇದೆಗೆ ಕಪಾಳ ಮೋಕ್ಷ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದಾಳೆ. ಸಪ್ನಾ ಪಾಟೀಲ್ ಮತ್ತಾಕೆಯ ಪತಿ ಸೋಪನ್ ಅವ್ಹಾದ್ ಕಾರಿನಲ್ಲಿ ಥಾಣೆ-ಬೇಲಾಪುರ ರಸ್ತೆಯಲ್ಲಿ ಬರ್ತಾ ಇದ್ರು. ನೋ ಎಂಟ್ರಿ ಲೇನ್ ಪ್ರವೇಶಿಸಿದ್ದಾರೆ. ಸಂಚಾರಿ ಪೇದೆ ಪ್ರಿತೇಶ್ ಭಟುಸೆ, ಕಾರು ನಿಲ್ಲಿಸುವಂತೆ ಕೈಮಾಡಿದ್ದಾರೆ.

ಆದ್ರೆ ದಂಪತಿ ಕಾರನ್ನು ನಿಲ್ಲಿಸದೆ ಕಾನ್ ಸ್ಟೇಬಲ್ ಮೈಮೇಲೆ ಹರಿಸಲು ಪ್ರಯತ್ನಿಸಿದ್ದಾರಂತೆ. ಅಷ್ಟೇ ಅಲ್ಲ ಪೇದೆಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಸಪ್ನಾ ಕಪಾಳಕ್ಕೆ ಹೊಡೆದಿದ್ದಾಳೆ. ಗೂಂಡಾಗಳನ್ನು ಕರೆಸಿ ಥಳಿಸೋದಾಗಿ ಬೆದರಿಕೆ ಹಾಕಿದ್ದಾಳೆ.

ಗುರುವಾರ ನಡೆದ ಘಟನೆ ಇದು. ಪೊಲೀಸ್ ಪೇದೆ ಮೇಲೆ ಕೈಮಾಡಿದ ಆರೋಪದ ಮೇಲೆ ದಂಪತಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...